Monday, December 23, 2024

3.5 ಕೆ.ಜಿ ಚಿನ್ನ, 10 ಲಕ್ಷ ನಗದು ಕಳ್ಳತನ!

ಬೆಂಗಳೂರು : ತಿಲಕ್ ನಗರದ SRK ಗಾರ್ಡನ್​ನಲ್ಲಿ ಮನೆ ಲಾಕ್ ಮುರಿದು 3.5 ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್​ ಆಗಿದ್ದಾನೆ. ಮನೆಯವರೆಲ್ಲ ರಾಮನಗರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಖತರ್ನಾಕ್​ ಕಳ್ಳ ಮನೆಯಲ್ಲಿಯೇ ಯಾರು ಇಲ್ಲದಿರುವುದು ಗಮನಿಸಿಯೇ ಈ ಕೃತ್ಯ ಎಸಗಿದ್ದಾನೆ. ಮಗಳ ಮದುವೆ ಕೂಡ ಫಿಕ್ಸ್ ಅಗಿತ್ತು. ಹಾಗಾಗಿ ಆಭರಣ ಎಲ್ಲವನ್ನು ಮಾಡಿಸಿ, ಮನೆಯಲ್ಲಿಟ್ಟಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ತಿಲಕ್ ನಗರ ಪೊಲೀಸರು ಮನೆಗೆ ಭೇಟಿ ನೀಡಿ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ‘ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ’ : ಉದಯನಿಧಿ ಸ್ಟಾಲಿನ್​!

ಮನೆಯವರು ಯಾರು ಇಲ್ಲದಿರವುದನ್ನ ಗಮನಿಸಿಯೇ ಕಳ್ಳ ಈ ಕೃತ್ಯ ಎಸಗಿದ್ದಾನೆ. ಇನ್ನು ಸಿಸಿಟಿವಿ ಪರಿಶೀಲನೆ ನಡೆಸಿರುವ ತಿಲಕ್ ನಗರ ಪೊಲೀಸರಿಗೆ, ಮನೆಗೆ ಓರ್ವ ಬಂದಿರುವುದು ಗೊತ್ತಾಗಿದೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES