Monday, December 23, 2024

5 ಕೋಟಿ ಜನರನ್ನು ಕೊಲ್ಲಲಿದೆ ‘’‍X’’!

ಯುಕೆ: ಕೋವಿಡ್ -19 ಗಿಂತ ಮಾರಕವಾದ ಮತ್ತೊಂದು ಸಾಂಕ್ರಾಮಿಕ ರೋಗ ಬರಬಹುದು ಎಂದು ಯುಕೆ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಡಿಸೀಸ್ ಎಕ್ಸ್ ಎಂಬ ಹೆಸರಿಟ್ಟಿದೆ ಎಂದೂ ಮಾಹಿತಿ ನೀಡಿದ್ದಾರೆ.

ಇನ್ನು ಈ ರೋಗ X ವೈರಸ್, ಬ್ಯಾಕ್ಟೀಯ ಅಥವಾ ಶಿಲೀಂಧ್ರ ಯಾವುದೇ ಹೊಸ ಏಜೆಂಟ್‌ ಆಗಿರಬಹುದು. ಇದಕ್ಕೆ ಯಾವುದೇ ತಿಳಿದಿರುವ ಚಿಕಿತ್ಸೆಗಳಿರುವುದಿಲ್ಲ ಎಂದು WHO ಮಾಹಿತಿ ನೀಡಿದೆ. 1918-19 ಫ್ಲೂ ಸಾಂಕ್ರಾಮಿಕವು ವಿಶ್ವಾದ್ಯಂತ ಕನಿಷ್ಠ 5 ಕೋಟಿ ಜನರನ್ನು ಬಲಿ ತೆಗೆದುಕೊಂಡಿದೆ.

ಇದನ್ನೂ ಓದಿ: ಹೋಟೆಲ್​ಗೆ ಕಲ್ಲು ತೂರಿದ ಕಿಡಿಗೇಡಿಗಳು!

ಮೊದಲನೆಯ ಮಹಾಯುದ್ಧದಲ್ಲಿ ಸತ್ತವರಿಗಿಂತ ಎರಡು ಪಟ್ಟು ಹೆಚ್ಚು. ಇಂದು ನಾವು ಇದೇ ರೀತಿಯ ಸಾವಿನ ಸಂಖ್ಯೆಯನ್ನು ನಿರೀಕ್ಷಿಸಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಹಲವಾರು ವೈರಸ್‌ಗಳಲ್ಲಿ ಒಂದರಿಂದ ಈ ಕಾಯಿಲೆ ಹರಡಬಹುದು ಎಂದೂ ಅವರು ಹೇಳಿದರು.

RELATED ARTICLES

Related Articles

TRENDING ARTICLES