Wednesday, January 22, 2025

ಪೊಲೀಸರಿಗೆ ತರಿಸಿದ್ದ ತಿಂಡಿಯಲ್ಲಿ ಸಿಕ್ತು ಇಲಿ!

ಬೆಂಗಳೂರು : ಕಾವೇರಿ ವಿವಾದ ಹಿನ್ನೆಲೆ ಬೆಂಗಳೂರಿನಾದ್ಯಂತ ಇಂದು ಬಿಗಿ ಬಂದೋಬಸ್ತ್​ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ನೀಡಲಾದ ಪಲಾವ್​ ನಲ್ಲಿ ಇಲಿ ಸಿಕ್ಕಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ನಗರದ ಹೊಟೆಲ್​ ಗಳು ಬೆಂಗಳೂರು ಬಂದ್​ ಗೆ ಬೆಂಬಲ ಸೂಚಿಸಿದ್ದ ಕಾರಣ ಕರ್ತವ್ಯನಿರತ ಪೊಲೀಸರಿಗೆ ಪೊಲೀಸ್​ ಇಲಾಖೆಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಯಶವಂತಪುರ ಸಂಚಾರಿ ಪೊಲೀಸರಿಗೆ ತಿಂಡಿ ತರಿಸಲಾಗಿತ್ತು ಪೇದೇ ಮಂಜುನಾಥ್​ ಗೆ ನೀಡಿದ್ದ ಪಲಾವ್​ನಲ್ಲಿ ಇಲಿಯನ್ನು ಕಂಡು ಪೊಲೀಸರು ಶಾಕ್​ ಆಗಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರೈತರಿಗೂ ಕುರವೈ ಬೆಳೆಗೆ ನೀರು ಸಿಗಲಿ ಆದ್ರೆ.. : ನಟ ಸುದೀಪ್ ಪೋಸ್ಟ್

ಬಂದ್​ ಹಿನ್ನೆಲೆ ಯಶವಂತಪುರದ ಆರ್​ ಎಂ ಸಿ ಯಾರ್ಡ್​ ನ ಸಮೀಪದಲ್ಲಿರು ಅಶೋಕ ಹೋಟೆಲ್​ ನಿಂದ ಪೊಲೀಸರಿಗೆ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಹೊಟೆಲ್ ನಿಂದ ತಂದ  ಪೊಟ್ಟಣಗಳಲ್ಲಿ ಇಲಿ ಇದ್ದದ್ದನ್ನು ಕಂಡು ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES