Wednesday, January 22, 2025

ನಾಳೆ ಬಂದ್​ ಮತ್ತು ಮೆರವಣಿಗೆಗೆ ಯಾವುದೇ ಅನುಮತಿ ಇಲ್ಲ : ಕಮಿಷನರ್ ದಯಾನಂದ್​

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪನ್ನು ವಿರೋಧಿಸಿ ಮತ್ತು ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣ ಸಮಿತಿ ವತಿಯಿಂದ ಮಂಗಳವಾರ ಬೆಂಗಳೂರು ಬಂದ್​ ಮತ್ತು ಮೆರವಣಿಗೆಗೆ ಕರೆ ನೀಡಲಾಗಿದೆ. ಆದರೇ ಈ ಬಂದ್​ ಮತ್ತು ಮೆರವಣಿಗೆಗೆ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್​ ಕಮಿಷನರ್​ ದಯಾನಂದ್​ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಾಳೇ ಬೆಂಗಳೂರು ಬಂದ್​ ನಡೆಸಲು ವಿವಿಧ ಸಂಘಟನೆಗಳು ತೀರ್ಮಾನಿಸುರುವುದಕ್ಕೆ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ, ಬೆಂಗಳೂರಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಂದು ರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆಯ ವರೆಗೆ 144 ಸೆಕ್ಷನ್​, ಜಾರಿ ಮಾಡಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶಗಳು ಕೂಡ ಯಾವುದೇ ರೀತಿಯ ಬಂದ್​ ಗಳಿಗೆ ಅವಕಾಶ ಕೊಡುವುದಿಲ್ಲ, ಬಂದ್​ ವೇಳೆ ಯಾವುದೇ ಅಹಿತಕರ ಸಂಘಟನೆಗಳು ನಡೆದು ಯಾವುದೇ ಆಸ್ತಿ ಪಾಸ್ತಿಗಳಿಗೆ ಹಾನಿಯಾದರೇ ಅದನ್ನು ಆಯೋಜಕರಿಂದಂಲೇ ವಸೂಲಿ ಮಾಡುವಂತೆ ನ್ಯಾಯಾಲಯದ ಸೂಚನೆ ಇದೆ. ಆದ್ದರಿಂದ ನಾಳೆ ನಡೆಯಲಿರುವ ಬೆಂಗಳೂರು ಬಂದ್​ ಮತ್ತು ಮೆರವಣಿಗೆಗೆ ಯಾವುದೇ ಅನುಮತಿಗಳನ್ನು ನೀಡಲು ಆಗುವುದಿಲ್ಲ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ​, ಸೆಂಟ್ರಲ್​ ರೇಂಜ್​ ನಲ್ಲೂ ಕಟ್ಟೆಚರ ವಹಿಸಲಾಗಿದೆ. ಈ ಕುರಿತು ಕೇಂದ್ರ ಕಚೇರಿಯಲ್ಲೂ ಸಭೆ ನಡೆಸಿ ಅವರ ಸಹಕಾರದೊಂದಿಗೆ ಕಟ್ಟೆಚ್ಚರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES