Saturday, January 18, 2025

ರಸ್ತೆ ಬದಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ; ಇಬ್ಬರು ಸಾವು

ರಾಯಚೂರು : ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿದ್ದ ಪ್ರಕರಣ ಹಿನ್ನೆಲೆ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ ಘಟನೆ ಸಿಂಧನೂರಿನ ಮಲ್ಲದಗುಡ್ಡ ಗ್ರಾಮದ ಬಳಿ ನಡೆದಿದೆ.

ನಿನ್ನೆ ರಾತ್ರಿ ಸಿಂಧನೂರಿನಿಂದ ಅಂಕಲಿಮಠದ ಕಡೆಗೆ ಹೋರಟಿದ್ದ ಸಾರಿಗೆ ಬಸ್​ವೊಂದು ಎದುರಿಗೆ ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ದಾರಿ ಬಿಡಲು ಹೋಗಿ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಅವಘಡದಿಂದ ನಿರ್ವಾಹಕ ಸೇರಿ 5 ಜನರ ಸ್ಥಿತಿ ಗಂಭೀರವಾಗಿದ್ದು, ಬಸ್‌ನಲ್ಲಿದ್ದ 32 ಜನರಿಗೆ ಗಾಯವಾಗಿತ್ತು.

ಇದನ್ನು ಓದಿ : ಏಷಿಯನ್ ಗೇಮ್ಸ್​ 2023: ಮೊದಲ ದಿನವೇ ಭಾರತದ ಪದಕ ಬೇಟೆ ಆರಂಭ!

ಈ ಘಟನೆ ಲಾರಿ ಚಾಲಕ ಇಂಡಿಕೇಟರ್ ಹಾಕದೆ ರಸ್ತೆ ಪಕ್ಕದಲ್ಲಿ ಲಾಎಇ ನಿಲ್ಲಿಸಿಕೊಂಡಿದ್ದಕ್ಕೆ ಈ ಅವಘಡ ಸಂಭವಿಸಿದೆ. ಸದ್ಯ ಗಂಭೀರ ಗಾಯಾಳುಗಳನ್ನು ಬಳ್ಳಾರಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ದುರಾದೃಷ್ಟವಶಾತ್ ಇಂದು ಸುದೀಪ್ (18) ಹಾಗೂ ರಾಮಪ್ಪ (60) ಮೃತ ವ್ಯಕ್ತಿಗಳು. ಎಂಬುವವರು ಸಾವನ್ನಪ್ಪಿದ್ದಾರೆ.

ಈ ಘಟನೆ ಸಂಬಂಧ ಸಿಂಧನೂರಿನ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕ ಅಮರೇಶ್ ಮತ್ತು ಲಾರಿ ಚಾಲಕ ನಾಗೇಶ್ವರರಾವ್ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES