Monday, December 23, 2024

ಆಸಿಸ್ ಉಡೀಸ್.. ಭಾರತಕ್ಕೆ ಅಮೋಘ ಜಯ

ಬೆಂಗಳೂರು : ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 217 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತ 99 ರನ್​ಗಳ (ಡಕ್​ವರ್ತ್​ ಲೂಯಿಸ್) ಪ್ರಚಂಡ ಗೆಲುವು ದಾಖಲಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆಸಿಸ್​ ಬೌಲರ್​ಗಳ ದಾಳಿಯನ್ನು ಧ್ವಂಸ ಮಾಡಿತು. 5 ವಿಕೆಟ್ ನಷ್ಟಕ್ಕೆ 399 ರನ್​ ಗಳಿಸಿ, ಆಸಿಸ್​ಗೆ 400 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಭಾರತದ ಬೌಲರ್​ಗಳು ಪೆವಿಲಿಯನ್ ಹಾದಿ ತೋರಿದರು.

ಮಳೆ ಅಡ್ಡಿಯಾಗಿದ್ದರಿಂದ ಡಿಎಲ್​ಎಸ್​ ನಿಯಮದಂತೆ ಆಸಿಸ್​ಗೆ 33 ಓವರ್​ಗಳಲ್ಲಿ 317 ರನ್ ಟಾರ್ಗೆಟ್ ನೀಡಲಾಯಿತು. ಆದರೆ, ಭಾರತದ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಕುಸಿಯಿತು. ಆಸಿಸ್​ ಪರ ಡೇವಿಡ್ ವಾರ್ನರ್ 53 ರನ್​ ಗಳಿಸಿದರು. ಕೊನೆಯಲ್ಲಿ ಅಬಾಟ್​ (54) ಅಬ್ಬರಿಸಿದರೂ ಜಯ ಸಾಧ್ಯವಾಗಲಿಲ್ಲ.

ಭಾರತರ ಪರ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್, ಕನ್ನಡಿಗ ಪ್ರಸಿದ್ಧ್ ಕೃಷ್ಣ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಇನ್ನೂ ಒಂದು ಏಕದಿನ ಪಂದ್ಯ ಬಾಕಿ ಇರುವಾಗಲೇ ಭಾರತ ಸರಣಿ ಕೈವಶ ಮಾಡಿಕೊಂಡಿದೆ.

RELATED ARTICLES

Related Articles

TRENDING ARTICLES