Wednesday, January 22, 2025

ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಪತ್ತೆ

ಕೋಲಾರ : ಪ್ರಿಯಕರನ ಜೊತೆ ಅರಣ್ಯ ಪ್ರದೇಶಕ್ಕೆ ತೆರಳಿದ್ದ ಯುವತಿ ಕೊನೆಗೆ ಶವವಾಗಿ ಪತ್ತೆಯಾಗಿರುವ ಘಟನೆ ಶ್ರೀನಿವಾಸ ತಾಲೂಕಿನ ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಪೀಲೇರು ಗ್ರಾಮದ ಹರ್ಷಿತ (20) ಮೃತ ಯುವತಿ. ಎಂಬ ಯುವತಿ ಹಾಗೂ ಹೇಮಂತ್ ಇವರಿಬ್ಬರು ಪ್ರೀತಿಸುತ್ತಿದ್ದರು. ಇದರ ಬೆನ್ನಲ್ಲೇ ಹರ್ಷಿತ ತನ್ನ ಪ್ರಿಯಕರ ಹೇಮತ್ ಜೊತೆಗೆ ಅರಣ್ಯ ಪ್ರದೇಶಕ್ಕೆ ಬಂದಿದ್ದಳು.

ಇದನ್ನು ಓದಿ : ಗಣೇಶೋತ್ಸವ ಹೆಸರಲ್ಲಿ ಮದ್ಯದ ಬಾಟಲಿಯ ಲಕ್ಕಿ ಕೂಪನ್

ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಯುವಕ ಬೇಜಾರ ಆಗಿ ಹರ್ಷಿತಳನ್ನು ಅರಣ್ಯ ಪ್ರದೇಶದಲ್ಲಿಯೇ ಬಿಟ್ಟು ತೆರಳಿದ್ದನು. ಸ್ವಲ್ಪ ಹೊತ್ತಿನ ಬಳಿಕ ಹೇಮಂತ್ ಯುವತಿಯ ಬಳಿ ವಾಪಸ್ ಬಂದಾಗ ಹರ್ಷಿತ್ ಶವವಾಗಿ ಗೋಚರವಾಗಿದ್ದಾಳೆ.

ಪ್ರಿಯತಮೆಯ ಶವವನ್ನು ಕಂಡು ಹೇಮಂತ್ ದಿಗ್ಬ್ರಮೆಗೊಂಡಿದ್ದಾನೆ. ಈ ಘಟನೆ ಸಂಬಂಧ ರಾಯಲ್ಪಾಡು ಪೋಲಿಸರಿಂದ ದೂರು ದೂರು ದಾಖಲಾಗಿದ್ದು, ತನಿಖೆಯನ್ನು ನಡೆಸಿದ್ದಾರೆ.

RELATED ARTICLES

Related Articles

TRENDING ARTICLES