ಬೆಂಗಳೂರು : ಎನ್ಡಿಎ ಗೆ ಜೆಡಿಎಸ್ ಸೇರ್ಪಡೆ ನಿರ್ಧಾರದಿಂದ ರಾಜ್ಯದಲ್ಲಿ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎನ್ಡಿಎ ಗೆ ಜೆಡಿಎಸ್ ಬೆಂಬಲ ನೀಡಿರುವುದರಿಂದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಇದು ಸಹಕಾರಿ ಯಾಗುತ್ತದೆ, ಕಾವೇರಿ ನದಿ ನೀರಿನ ವಿಷಯದಲ್ಲಿ ನಾವು ಮೇಲ್ಮನವಿ ಸಲ್ಲಿಸಬೇಕು. ಕೇಂದ್ರದಿಂದ ಇಲ್ಲಿಗೆ ತಜ್ಞರ ತಂಡವನ್ನು ಕಳುಹಿಸಿಕೊಡಲಿ, ಜಲಾಶಯದ ನೀರಿನ ಮಟ್ಟ ವನ್ನು ನೋಡಿ ಪರಿಶೀಲಿಸಲಿ.
ಇದನ್ನೂ ಓದಿ: ಬಸವಣ್ಣನ ಐಕ್ಯಮಂಟಪದ ಬಳಿ ದೆವ್ವ ಬಿಡಿಸುವ ಅನಾಚಾರ: ಜನರು ಆಕ್ರೋಶ!
ಬೆಂಗಳೂರಿಗೆ ಕುಡಿಯುವ ನೀರುಪೈರೈಯಕೆ ಮಾಡಲಾಗದ ಪರಿಸ್ಥಿತಿ ಸದ್ಯಕ್ಕಿದೆ, ಇಂಥ ಸಂದರ್ಭದಲ್ಲಿ ನಾವು ನೀರು ಬಿಡುವ ಪರಿಸ್ಥಿತಿಯಿಲ್ಲಿ ಇದರ ಬಗ್ಗೆ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡುವ ಎಲ್ಲಾ ಪ್ರಯತ್ನ ವನ್ನು ಸರ್ಕಾರ ಮಾಡಬೇಕು ಎಂದರು.
ಈಗಾಗಲೇ ನಮ್ಮ ಕುಮಾರಸ್ವಾಮಿಯವರು ಕಾವೇರಿ ಬಗ್ಗೆ ದೆಹಲಿಯಲ್ಲಿ ಚರ್ಚೆ ಮಾಡಿದ್ದಾರೆ. ಇದರ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ, ಎಲ್ಲರು ಇವರ ಪರವಾಗಿದ್ದಾರೆ ವಿನಹ ಯಾರು ಕೂಡ ಇದರ ವಿರೋಧ ಇಲ್ಲ. ಇದಕ್ಕೆ ಇರುವುದು ಒಂದೇ ಮಾರ್ಗ,ಮೇಲ್ಮನವಿ ಸಲ್ಲಿಸಬೇಕು ತಜ್ಞರನ್ನು ಕಳುಹಿಸಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಅವಲೋಕಿಸಬೇಕು ಆ ನಂತರ ನೀವು ಏನು ತೀರ್ಮಾನ ತಗೊತ್ತೀರೋ ಅದಕ್ಕೆ ಬದ್ದರಾಗು ತೀರ್ಮಾನ ಮಾಡ್ತೀವಿ ಎಂದು ಅವರು ಹೇಳಿದರು.