Sunday, December 22, 2024

ಮಂಡ್ಯದಲ್ಲಿ ಬುಗಿಲೆದ್ದ ಕಾವೇರಿ ಕಿಚ್ಚು : ಮಂಡ್ಯ ಮದ್ದೂರು ಸಂಪೂರ್ಣ ಬಂದ್!

ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು, ವಿವಿಧ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಸಾಥ್​ ನೀಡಿವೆ.

ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ಸ್​ ಕಾವೇರಿ ನೀರು ಹರಿಸುವಂತೆ ಸುಪ್ರಿಂಕೋರ್ಟ್​ ನೀಡಿರುವ ಆದೇಶವನ್ನು ವಿರೋಧಿಸಿ ಮತ್ತು ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸದಂತೆ ಪಟ್ಟುಹಿಡಿದು ಇಂದು ಮಂಡ್ಯ, ಮದ್ದೂರು ಭಾಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಜೆಡಿಎಸ್​ ಸೇರ್ಪಡೆಯಿಂದ ಬಿಜೆಪಿಗೆ ದೊಡ್ಡ ಬಲ ಬಂದಿದೆ: ಬಿಎಸ್​ವೈ

ಬಂದ್​ ಆಚರಣೆಗೆ ರೈತ ಸಂಘಟನೆ, ಕನ್ನಡಪರ ಸಂಘಟನೆ, ವರ್ತಕರ ಸಂಘ, ಹೋಟೆಲ್, ಪೆಟ್ರೋಲ್ ಬಂಕ್
ಆಟೋ ಚಾಲಕರು, ಖಾಸಗಿ ಬಸ್, ಲಾರಿ ಮಾಲೀಕರ ಬೆಂಬಲ ನೀಡಿದೆ. ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮೆರವಣಿಗೆ ನಡೆಯುತ್ತಿದ್ದು ಹಲವೆಡೆ ರಸ್ತೆಗಳಲ್ಲಿ ಬೈಕ್‌ ರ್ಯಾಲಿ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.  ಇದರೊಂದಿಗೆ ಮಂಡ್ಯ ನಗರ, ಮದ್ದೂರು ಪಟ್ಟಣ ವ್ಯಾಪಾರ ವಹಿವಾಟಿಲ್ಲದೇ ಸಂಪೂರ್ಣ ಸ್ತಬ್ಧವಾಗಿದ್ದು ಬಂದ್ ಗೆ ಬೆಂಬಲ ಸೂಚಿಸಿದೆ.

RELATED ARTICLES

Related Articles

TRENDING ARTICLES