Wednesday, December 25, 2024

ಬಸವಣ್ಣನ ಐಕ್ಯಮಂಟಪದ ಬಳಿ ದೆವ್ವ ಬಿಡಿಸುವ ಅನಾಚಾರ: ಜನರು ಆಕ್ರೋಶ!

ಬಾಗಲಕೋಟೆ : ಜಿಲ್ಲೆಯ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಬಳಿ ಗಾಳಿ(ದೆವ್ವ) ಬಿಡಿಸುವ ಅನಾಚಾರ ನಡೆಯುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೂಢನಂಬಿಕೆ, ಕಂದಾಚಾರದ ವಿರುದ್ದ ಹೋರಾಡಿದ ಬಸವಣ್ಣನ ನೆಲದಲ್ಲಿ ಮೌಢ್ಯಾಚರಣೆ ತಲೆ ಎತ್ತಿದೆ. ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಬಳಿ ಗಾಳಿ(ದೆವ್ವ) ಬಿಡಿಸುವ ಅನಾಚಾರವು ಅಪರಿಚಿತ ವ್ಯಕ್ತಿಗಳಿಂದ ಎಗ್ಗಿಲ್ಲದೇ ನಡೆಯುತ್ತಿದೆ.

ಇದನ್ನೂ ಓದಿ : ಚೈತ್ರ ವಂಚನೆ ಪ್ರಕರಣ: ಕುಂದಾಪುರ ಹೆಸರು ಬಳಸದಂತೆ ಕೋರ್ಟ್​​ ಮೊರೆ!

ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಬಳಿ ಬಸವಣ್ಣನ ವಿಚಾರಗಳಿಗೆ ತದ್ವಿರುದ್ದ ಮೌಢ್ಯ ಬಿತ್ತುವ ಚಟುವಟಿಕೆಗಳು ನಡೆಯುತ್ತಿದ್ದರು ಇಲ್ಲಿನ ಕೂಡಲ ಸಂಗಮ ಅಭಿವೃದ್ದಿ ಪ್ರಧಿಕಾರದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಮೌಢ್ಯ ಬಿತ್ತುವ ಚಟುವಟಿಕೆಗೆ ಬಸವ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಕೂಡಲೆ ಇದರ ವಿರುದ್ದ ಕ್ರಮ ಕೈಗೊಳ್ಳುವತೆ ಆಗ್ರಹಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES