Thursday, December 26, 2024

ಮತ್ತೆ ಮೋದಿ ಪ್ರಧಾನಿ ಆಗ್ತಾರೆ, ಪಾಕಿಸ್ತಾನದಲ್ಲಿ ಗಣಪತಿ ಕೂರಿಸ್ತೀವಿ : ಶಾಸಕ ಯತ್ನಾಳ್

ಹುಬ್ಬಳ್ಳಿ : ನಮ್ಮ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಈ ಮಕ್ಕಳ ಅನುಮತಿ ಬೇಕಂತೆ. 2024ರಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗ್ತಾರೆ. ಪಾಕಿಸ್ತಾನದ ಲಾಹೋರಿನಲ್ಲಿ ಗಣಪತಿ ಕೂರಿಸ್ತೀವಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.

ಹುಬ್ಬಳ್ಳಿಯಲ್ಲಿ ಈದ್ಗಾ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಿ ಬಂದೀವಿ. ಇದೇ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡ್ತೀವಿ ಎಂದು ಹೇಳಿದರು.

ಪಾಕಿಸ್ತಾನದಲ್ಲಿ ತಿನ್ನೋಕೆ ಅನ್ನ ಇಲ್ಲ, ಪಾಕಿಸ್ತಾನ್ ಜಿಂದಾಬಾದ್ ಅಂತಾರೆ. ಮೋದಿಯವರು ಇನ್ನೊಮ್ಮೆ ಪ್ರಧಾನಿ ಆಗ್ತಾರೆ, ಪಾಕಿಸ್ತಾನ ದಾಟಿ ಅಪ್ಘಾನಿಸ್ತಾನ್ ಬಾರ್ಡರ್‌ವರೆಗೆ ಹೋಗ್ತೀವಿ. ಮೈದಾನಕ್ಕೆ ಈದ್ಗಾ ಮೈದಾನ ಅಂದ್ರೆ ಸಾಬರಿಗೆ ಹುಟ್ಟಿದಂತೆ. ಈ ಮೈದಾನಕ್ಕೆ‌ ರಾಣಿ ಚೆನ್ನಮ್ಮ ಮೈದಾನ ಅನ್ನಬೇಕು. ಡಿಎಂಕೆ ಮುಖಂಡ ಹೇಳ್ತಾನೆ, ಸನಾತನ ಧರ್ಮಕ್ಕೆ ರೋಗ ಅಂತಾನೆ. ಸನಾತನ ಧರ್ಮವನ್ನು ವಿರೋಧಿಸುವವರೆಲ್ಲರಿಗೆ ಏಡ್ಸ್ ಬರುತ್ತೆ ಎಂದು ಕಿಡಿಕಾರಿದರು.

ಈದ್ಗಾ ಮೈದಾನ ಯಾರಪ್ಪನ ಆಸ್ತಿ ಅಲ್ಲ

ನರೇಂದ್ರ ಮೋದಿಯವರನ್ನು ವಿರೋಧಿಸುವವರೆಲ್ಲ ದೇಶದ್ರೋಹಿಗಳು. ಮೋದಿಯವರು ಪ್ರಧಾನಿಯಾಗಿರುವ ಕಾರಣ ದೇಶ ಶಾಂತವಾಗಿದೆ. ವಿಘ್ನಗಳು ನಾಶವಾಗಲಿ ಅಂತಾನೇ ಗಣೇಶ ಹಬ್ಬದ ದಿನ ಹೊಸ ಸಂಸತ್ ಭವನದಲ್ಲಿ ಮೋದಿ ಅಧಿವೇಶನ ಮಾಡ್ತಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನ ಯಾರಪ್ಪನ ಆಸ್ತಿ ಅಲ್ಲ. ಅಂಜುಮನ್ ಆಸ್ತಿ ಅಲ್ಲ, ಪಾಕಿಸ್ತಾನ ಆಸ್ತಿ ಅಲ್ಲ. ರಾಜ್ಯದ ವಕ್ಫ್ ಆಸ್ತಿ ಸರ್ಕಾರದ ವಶಕ್ಕೆ ಪಡೆಯಲು ಹೋರಾಡುತ್ತಿದ್ದೇವೆ ಎಂದರು.

ಹನುಮಾನ್ ಚಾಲಿಸಾ ಪಠಣ ಮಾಡ್ತೀವಿ

ಜಗದೀಶ್ ಶೆಟ್ಟರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಯತ್ನಾಳ್, ಫೋನ್‌ನಲ್ಲಿ ಹಿಂದಿನಿಂದ ನಾಟಕ ಮಾಡುತ್ತಿದ್ದಾರೆ. ನೀವು ಎಂಪಿ ಎಲೆಕ್ಷನ್‌ಗೆ ನಿಲ್ಲಿ ಜನ ಲಗಾ ಹೊಡಿಸ್ತಾರೆ. ಈದ್ಗಾ ಮೈದಾನದಲ್ಲಿ ಶೋಕಾಚರಣೆ ಮಾಡ್ತಾರಂತೆ. ನೀವು ಶೋಕಾಚರಣೆ ಮಾಡಿದ್ರೆ ಇದೇ ಮೈದಾನದಲ್ಲಿ ನಾವು ಹನುಮಾನ್ ಚಾಲಿಸಾ ಪಠಣ ಮಾಡ್ತೀವಿ ಎಂದು ತೆರೆದ ವಾಹನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿ ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES