Wednesday, January 22, 2025

ನಾಡು, ನುಡಿ, ಭಾಷೆ ವಿಚಾರದಲ್ಲಿ ಜನರ ಜೊತೆ ಸದಾ ಇರುತ್ತೇವೆ: ರಾಘವೇಂದ್ರ ರಾಜ್​ ಕುಮಾರ್​!

ಬೆಂಗಳೂರು: ನನ್ನ ತಂದೆ ಕೆಲವು ವಿಚಾರ ಕಲಿಸಿಕೊಟ್ಟು ಹೋಗಿದ್ದಾರೆ, ನಾಡು, ನುಡಿ, ಭಾಷೆ ವಿಚಾರ ಬಂದಾಗ ಯಾವಾಗಲು ಜನರ ಜೊತೆಗಿರಬೇಕು ಅಂತ ಹೇಳಿದ್ದಾರೆ ಇದಕ್ಕಾಗಿ ಪ್ರಾಣ ಮುಡಿಪಾಗಿ ಇಡುತ್ತೇವೆ ಎಂದು ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್​ ತಿಳಿಸಿದ್ದಾರೆ.

ನಗರದಲ್ಲಿ ಕಾವೇರಿ ಹೋರಾಟ ವಿಚಾರವಾಗಿ ಮಾತನಾಡಿದ ಅವರು ನನ್ನ ತಂದೆ ಕೆಲವು ವಿಚಾರ ಕಲಿಸಿಕೊಟ್ಟು ಹೋಗಿದ್ದಾರೆ ನಾಡು, ನುಡಿ, ಭಾಷೆ ವಿಚಾರ ಬಂದಾಗ ಜೊತೆಗಿರಬೇಕು ಅಂತ ಹೇಳಿದ್ದಾರೆ ಇದಕ್ಕೆ ಪ್ರಾಣ ಮುಡಿಪಾಗಿ ಇಡುತ್ತೇವೆ ಸದ್ಯ ಈ ವಿಚಾರ ಕೋರ್ಟ್ ನಲ್ಲಿ ಇದೆ, ನಮ್ಮ ನಮ್ಮ ಪಾತ್ರ ಬಂದಾಗ ಜನರೇ ನಮ್ಮನ್ನ ಕರಸಿಕೊಳ್ತಾರೆ ಆಗ ಬರ್ತೀವಿ, ಕೊನೆ ವರೆಗೂ ನಾವು ಜನರ ಜೊತೆ ಇರ್ತೀವಿ ಎಂದಿದ್ದಾರೆ.

ಇದನ್ನು ಓದಿ: ಸೂಟ್ ಕೇಸ್​ ತಲೆಯ ಮೇಲೆ ಹೊತ್ತ ರಾಹುಲ್ ಗಾಂಧಿ: ವಿಡಿಯೋ ವೈರಲ್​!

ಕಾವೇರಿ ವಿಚಾರವಾಗಿ ಸಿನಿಮಾ ರಂಗದ ಎಲ್ಲರು ಸೇರಿಕೊಂಡು ಹೋರಾಟ ಮಾಡಬೇಕು, ನಮ್ಮನ್ನ ಯಾವಾಗ ಕರೆದರೂ, ಎಲ್ಲಿಗೆ ಕರೆದರೂ ಬರ್ತೀವಿ, ಇದು ನಮ್ಮ ಜವಬ್ದಾರಿ ಎಂದು ಅವರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES