Wednesday, January 22, 2025

ಚೈತ್ರ ಕುಂದಾಪುರ ಪ್ರಕರಣದಲ್ಲಿ ತಮ್ಮ ಹೆಸರು ಬಳಕೆ: ಸಾಲು ಮರದ ತಿಮ್ಮಕ್ಕ ದೂರು ದಾಖಲು!

ಬೆಂಗಳೂರು : ವಿಧಾನಸಭಾ ಚುನಾವಣೆಗೆ ಟಿಕೇಟ್​ ವಂಚನೆ ಸಂಬಂಧ ಹಿಂದುಪರ ಸಂಘಟನೆ ಕಾರ್ಯಕರ್ತೆ ಚೈತ್ರ ಕುಂದಾಪುರ ತಂಡದ ಬಂಧನ ಪ್ರಕರಣದಲ್ಲಿ ನನ್ನ ಹೆಸರು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಾಲು ಮರದ ತಿಮ್ಮಕ್ಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ನಗರದ ಪೊಲೀಸ್​ ಆಯುಕ್ತರ ಕಛೆರಿಯಲ್ಲಿ ಖುದ್ದು ತಿಮ್ಮಕ್ಕ ಅವರಿಂದ ಆಯುಕ್ತರ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಎಸಿಪಿ ವೇಣುಗೋಪಾಲ್​ ಅವರು ದೂರು ಸ್ವೀಕರಿಸಿದರು.

ಇದನ್ನೂ ಓದಿ: ಮೊಹಮ್ಮದ್ ಸಿರಾಜ್​​ ವಿಶ್ವದ ನಂ.1 ಬೌಲರ್!

ಬಿಜೆಪಿ ಟಿಕೆಟ್​​ ಕೊಡಿಸುವುದಾಗಿ ಉದ್ಯಮಿಯನ್ನು ವಂಚಿಸಿದ ಆರೋಪ ಹೊತ್ತಿರುವ ಚೈತ್ರ ಕುಂದಾಪುರ ಮತ್ತು ತಂಡದ ಜೊತೆಯಲ್ಲಿ ನನ್ನ ಹಾಗೂ ನನ್ನ ಮಗ ಉಮೇಶ್​ ಗೂ ಯಾವುದೇ ಸಂಬಂಧವಿಲ್ಲ ಆದರೂ ನಮ್ಮ ಹೆಸರು ಕೇಳಿಬರುತ್ತಿದೆ ಇದರಿಂದಾಗಿ ಮನಸ್ಸಿಗೆ ಭಾರಿ ನೋವುಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES