Tuesday, November 5, 2024

ಸುಪ್ರೀಂ ಕೋರ್ಟ್ ಆದೇಶ ವಿರೋಧ; ಖಾಲಿ ಮಡಕೆ ಒಡೆದು ಪ್ರತಿಭಟನೆ

ಚಾಮರಾಜನಗರ : ಕಾವೇರಿ ನೀರು ವಿಚಾರದ ಹಿನ್ನೆಲೆ ಸುಪ್ರೀಂ ಕೋರ್ಟ್​ ಆದೇಶವನ್ನು ವಿರೋಧಿಸಿ ಖಾಲಿ ಮಡಕೆ ಒಡೆದು ಪ್ರತಿಭಟನೆ ಮಾಡುತ್ತಿರುವ ಘಟನೆ ಚಾಮರಾಜೇಶ್ವರ ದೇಗುಲ ಮುಂಭಾಗದಲ್ಲಿ ನಡೆಯುತ್ತಿದೆ.

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದಾಗಿ ಸುಪ್ರೀಂ ಕೋರ್ಟ್​ ನೀಡಿರುವ ಆದೇಶವನ್ನು ಕಂಡಿಸಿ ಚಾಮರಾಜನಗರದ ಕನ್ನಡಪರ ಸಂಘಟನೆಗಳಿಂದ ಖಾಲಿ ಮಡಕೆ ಹಿಡಿದು ಪ್ರತಿಭಟನೆ ಮಾಡುತ್ತಿದ್ದರೆ.

ಖಾಲಿ ಮಡಕೆಗಳನ್ನು ಹಿಡಿದು ಸುಪ್ರೀಂ ಕೋರ್ಟ್​ನ ತೀರ್ಪುನ್ನು  ಹಾಗೂ ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರದ ಘೋಷಣೆಯನ್ನು ಕೂಗುತ್ತ, ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದವರಗೆ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದರೆ.

ಇದನ್ನು ಓದಿ : ಕನ್ನಡ ಪರ ಸಂಘಟನೆಯ ಕಾರ್ಯಕರ್ತರು

ಅಷ್ಟೇ ಅಲ್ಲ ಕರ್ನಾಟಕಕ್ಕೆ ನೀರು ತಮಿಳುನಾಡಿಗೆ ಹಾಗೂ ತಮಿಳುನಾಡು ನಾಶವಾಗಲಿ, ಸುಪ್ರೀಂ ಕೋರ್ಟ್​ ತೀರ್ಪಿಗೆ ಧಿಕ್ಕಾರ ಹಾಗೂ ಆ ತಮಿಳುನಾಡು ಸತ್ತು ಹೋಗಿದೆ ಎಂದು ಘೋಷಣೆಗಳನ್ನು ಕೂಗಿದರು. ಬಳಿಕ ರಾಷ್ರೀಯ ಹೆದ್ದಾರಿಯಲ್ಲಿ ಖಾಲಿ ಮಡಕೆಗಳನ್ನು ಒಡೆದು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES