ಮೈಸೂರು : ಹಳೆಯ ಸಂಸತ್ ಭವನಕ್ಕೆ ಕೇಂದ್ರ ಸರ್ಕಾರ ಸಂವಿಧಾನ ಭವನ ಎಂದು ಹೆಸರಿಟ್ಟ ಹಿನ್ನೆಲೆ ಕಟ್ಟಡ ಮೇಲಷ್ಟೇ ಅಲ್ಲ ನಿಮ್ಮೆದೆಯಲ್ಲೂ ನಮ್ಮ ಸಂವಿಧಾನ ಕಾಪಾಡಿಕೊಳ್ಳಿ ಎಂದು ಸಚಿವ ಹೆಚ್ ಸಿ ಮಹದೇವಪ್ಪ ವ್ಯಂಗ್ಯ ಮಾಡಿದ್ದಾರೆ.
ಹೊಸ ಸಂಸತ್ ಭವನಕ್ಕೆ ಕಾಲಿಟ್ಟ ಹಿನ್ನೆಲೆ ಹಳೆಯ ಸಂಸತ್ ಭವನದ ನೆನಪಿಗಾಗಿ ಕೇಂದ್ರ ಸರ್ಕಾರ ಸಂವಿಧಾನ ಭವನ ಎಂದು ಹೆಸರಿಟ್ಟಿದ್ದಾರೆ. ಈ ಹಿನ್ನೆಲೆ ಕಾಂಗ್ರೇಸ್ ಸಚಿವ ಹೆಚ್.ಸಿ ಮಹದೇವಪ್ಪ ಅವರು ಸಂವಿಧಾನನ ಹೆಸರನ್ನು ನೆನಪು ಮಾಡಿಕೊಳ್ಳುತ್ತೀರುವ ಬಿಜೆಪಿಗರು, ಅಸಂವಿಧಾನಿಕ ಚಟುವಟಿಕೆಗಳಿಗಾಗಿಯೇ ಸದಾ ಕುಖ್ಯಾತಿ ಹೊಂದಿರುವಂತಾವರು ಎಂದು ಟ್ವಿಟ್ ಮಾಡುವ ಮೂಲಕ ಹೇಳಿದ್ದಾರೆ.
ಇದನ್ನು ಓದಿ : ಪೊರಕೆಯಿಂದ ಹೊಡೆದು ಜಾತಿ ನಿಂದನೆ ಆರೋಪ; ಯುವಕ ಆತ್ಮಹತ್ಯೆ
ಇಂತವರು ಈ ಚುನಾವಣೆಯ ಸಂದರ್ಭದ ನಾಟಕಗಳಿಗೆ ಏನು ಹೇಳಬೇಕೋ ತಿಳಿಯದಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಆಮಿಷಗಳನ್ನು ಒಡ್ಡಿ ಹಾಗೂ ಸಂವಿಧಾನ ವಿರೋಧಿ ನೀತಿಗಳಿಗೆ ವಿರುದ್ಧವಾಗಿ ಸರ್ಕಾರಗಳನ್ನ ಕೆಡವುವರು ಈ ಬಿಜೆಪಿಗರು ಎಂದು ಹೇಳಿದ್ದಾರೆ.
ಹಳೆಯ ಸಂಸತ್ ಭವನಕ್ಕೆ ಸಂವಿಧಾನ ಭವನ ಎಂದು ಹೆಸರು ಇಟ್ಟಿರುವುದು ಇವರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ. ಕಟ್ಟಡ ಮೇಲಷ್ಟೇ ಅಲ್ಲ ನಿಮ್ಮೆದೆಯಲ್ಲೂ ನಮ್ಮ ಸಂವಿಧಾನ ಕಾಪಾಡಿಕೊಳ್ಳಿ. ಹಾಗೂ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ 33% ರಾಜಕೀಯ ಮೀಸಲಾತಿ ಘೋಷಣೆ ಮಾಡಿದ್ದಾರೆ. ಆದರೆ ನಾಲ್ಕುವರೆ ವರ್ಷಗಳ ಕಾಲ ಮಲಗಿದ್ದ ಕೇಂದ್ರ ಸರ್ಕಾರಕ್ಕೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ರಾಜಕೀಯ ಮೀಸಲಾತಿ ಅವರಿಗೆ ನೆನಪಾಗಿದೆ ಎಂದು ಮಹದೇವಪ್ಪ ವ್ಯಂಗ್ಯ ಮಾಡಿದ್ದಾರೆ.
ಆದರೆ ನುಡಿದಂತೆ ನಡೆಯುವ ಪಕ್ಷ ಯಾವುದು ಎಂದು ನಮ್ಮ ಗೃಹಲಕ್ಷೀಯರಿಗೆ ಚೆನ್ನಾಗಿ ತಿಳಿದಿದೆ ಎಂದು ಬಿಜೆಪಿಯವರಿಗೆ ಟ್ವಿಟ್ ಮಾಡುವ ಮೂಲಕ ವ್ಯಂಗ್ಯವಾಗಿ ಮಾತನಾಡಿದ್ದಾರೆ.