Wednesday, October 30, 2024

ಮನೆಯಲ್ಲಿದ್ದರವನ್ನು ಕಟ್ಟಿಹಾಕಿ ಕೋಟಿ ಕೋಟಿ ಲೂಟಿ ಮಾಡಿದ ಖತರ್ನಾಕ್​ ಕಳ್ಳರು!

ಹುಬ್ಬಳ್ಳಿ : ಮನೆಯಲ್ಲಿದ್ದವರನ್ನ ಕಟ್ಟಿಹಾಕಿದ ಖತರ್ನಾಕ್​ ಕಳ್ಳರು ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ನಡೆದಿದೆ.

ವಿದ್ಯಾಮಂದಿರ ಡಿಪೋ ಮಾಲೀಕರಾದ ಉಲ್ಲಾಸ ದೊಡ್ಡಮನಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಗಣೇಶ ಹಬ್ಬದ ಹಿನ್ನೆಲೆ ನಗರದ ಈದ್ಗಾ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಗಣೇಶನ ವಿಸರ್ಜನೆಗೆ ನಗರದ ಜನತೆ ತೆರಳಿದ್ದರು. ಬಸವೇಶ್ವರ ನಗರದ ಲಕ್ಷ್ಮಿ ಲೇಔಟ್​ನಲ್ಲಿಯೂ ಕೂಡ ವಿರಳವಾಗಿದ್ದರು. ಈ ವೇಳೆ ಸುಮಾರು 8 ಜನ ಡಕಾಯಿತರು ಮನೆಯ ಕಿಟಕಿಯ ಕಬ್ಬಿಣದ ಗ್ರಿಲ್​ ಕತ್ತರಿಸಿ ಒಳಗೆ ನುಗ್ಗಿದ್ದಾರೆ.

ಇದನ್ನೂ ಓದಿ : ಚೈತ್ರ ಕುಂದಾಪುರ ಪ್ರಕರಣದಲ್ಲಿ ತಮ್ಮ ಹೆಸರು ಬಳಕೆ: ಸಾಲು ಮರದ ತಿಮ್ಮಕ್ಕ ದೂರು ದಾಖಲು!

ಬಳಿಕ ಮನೆಯಲ್ಲಿದ್ದ 6 ಮಂದಿಯನ್ನು ಕಟ್ಟಿಹಾಕಿ ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ನಗರದ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಪ್ರತಿಷ್ಠಾಪನೆ ಮಾಡಲಾಗಿತ್ತು, ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜನರ ನಿಯಂತ್ರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಈದ್ಗಾ ಮೈದಾನದ ಬಳಿ ನಿಯೋಜನೆ ಮಾಡಲಾಗಿತ್ತು. ಇದರಿಂದಾಗಿ ನಗರದಲ್ಲಿ ಪೊಲೀಸ್​ ಬಂದೋಬಸ್ತ್​ ಇಲ್ಲದನ್ನೇ ಬಂಡವಾಳ ಮಾಡಿಕೊಂಡಿರುವ ಕದೀಮರು ಮನೆ ದೋಚಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಗೋಕುಲ್​ ರೋಡ್​ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES