ಉಡುಪಿ : ಮೂರು ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಯುವಕನೊಬ್ಬ ತನ್ನ ತಾಯಿಗೆ ಸರ್ಪ್ರೈಸ್ ನೀಡಲು ತೆರಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ತಾಯಿ ಪ್ರೀತಿ ಮುಂದೆ ಬೇರೆ ಏನೇನೂ ಇಲ್ಲ ಅನ್ನೋದಕ್ಕೆ ಈ ವೈರಲ್ ವೀಡಿಯೋ ಸಾಕ್ಷಿಯಾಗಿದೆ. ಮೂಲತಃ ಬೈಂದೂರು ತಾಲೂಕಿನ ಗಂಗೊಳ್ಳಿ ನಿವಾಸಿ ರೋಹಿತ್ ಎಂಬುವವನು ಮೂರು ವರ್ಷಗಳ ಬಳಿಕ ದುಬೈನಿಂದ ತಾಯ್ನಾಡಿಗೆ ತೆರಳಿದ್ದರು. ಅವರ ಮನೆಯವರಿಗೆ ಹಾಗೂ ಮಿತ್ರರಿಗೆ ಸರ್ಪ್ರೈಸ್ ಕೊಡುವ ಹಿನ್ನೆಲೆ ರೋಹಿತ್ ಮರಳಿ ಊರಿಗೆ ಬರುವ ವಿಷಯ ಕುರಿತು ಮಾಹಿತಿ ನೀಡದೆ ಊರಿಗೆ ಮರಳಿದ್ದರು.
ಇದನ್ನು ಓದಿ : ಆಟೋ ಚಾಲಕನ ಮೇಲೆ ಟಿಪ್ಪರ್ ಹರಿದು ಚಾಲಕ ಸಾವು
ಬಳಿಕ ಮನೆಗೆ ಮರಳಿದಾಗ ಆಗಲೇ ಅವರ ತಾಯಿ ಸುಮಿತ್ರ ಅವರು ದಿನನಿತ್ಯದ ಕಸುಬು ಮೀನು ಮಾರಾಟಕ್ಕೆಂದು ಮಾರುಕಟ್ಟೆಗೆ ಹೋಗಿದ್ದರು. ರೋಹಿತ್ ತಡ ಮಾಡದೆ ತಕ್ಷಣ ಮೀನು ಮಾರುಕಟ್ಟೆಗೆ ಬಂದಿದ್ದು, ತಾಯಿ ಮೀಸು ಮಾರುವ ಸ್ಥಳಕ್ಕೆ ಬಂದಿದ್ದು, ತನ್ನ ತಾಯಿಗೆ ಗುರುತು ಸಿಗದಂತೆ ಮುಖಕ್ಕೆ ಮಾಸ್ಕ ಹಾಕಿ ಮತ್ತು ತಲೆಗೆ ಕ್ಯಾಪ್ ಹಾಕಿಕೊಂಡು ಮೀನು ಖರೀದಿಗೆ ಬಂದಿರುವ ಹಾಗೇ ಬಂದಿದ್ದಾರೆ.
ಬಳಿಕ ತಾಯಿ ಜೊತೆನೇ ಚೌಕಾಸಿ ಶುರು ಮಾಡಿದ್ದರು. ಆದರೆ ಮಗ ಟೋಪಿ ಹಾಕಿ ಕರವಸ್ತ್ರ ಕಟ್ಟಿ ಕನ್ನಡಕ ಹಾಕಿದ್ದರೂ, ಇದು ತನ್ನದೇ ಮಗ ರೋಹಿತ್ ಎಂದು ಕಂಡುಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. 3 ವರ್ಷಗಳ ಬಳಿಕ ಮಗನನ್ನು ನೋಡಿದ್ದು, ರೋಹಿತ್ನನ್ನು ಬಿಗಿದಪ್ಪಿ ಕಣ್ಣೀರು ಸುರಿಸಿದ ತಾಯಿಯ ಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.