Saturday, November 23, 2024

ಬಾಲಕನನ್ನು ಕೊಂದು ತಿಂದಿದ್ದ ಹುಲಿ ಬೋನಿನಲ್ಲಿ ಸೆರೆ!

ಮೈಸೂರು: ಇತ್ತೀಚೆಗೆ ಬಾಲಕನನ್ನು ಕೊಂದು ತಿಂದಿದ್ದ ಹುಲಿಯೂ ಎಚ್‌.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ತಾವರೆನಾಯ್ಕ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ಇರಿಸಲಾಗಿದ್ದ ಬೋನಿನಲ್ಲಿ ಹುಲಿ  ಸೆರೆಯಾಗಿದೆ.

ಇದನ್ನೂ ಓದಿ: ಹುಕ್ಕಾ ಬಾರ್‌, ತಂಬಾಕು ಉತ್ಪನ್ನ ನಿಷೇಧ : ಸಚಿವ ದಿನೇಶ್​​ ಗುಂಡೂರಾವ್

15 ದಿನಗಳ ಹಿಂದೆ ಕಲ್ಲಹಟ್ಟಿ ಗ್ರಾಮದ 9 ವರ್ಷದ ಚರಣ್ ಎಂಬ ಬಾಲಕನನ್ನು 5 ವರ್ಷದ ಹುಲಿ ಕೊಂದು ತಿಂದಿತ್ತು. ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಗ್ರಾಮದ ಸುತ್ತ ಹಲವೆಡೆ ಬೋನುಗಳನ್ನು ಇರಿಸಲಾಗಿತ್ತು. ಮಂಗಳವಾರ ಸಂಜೆ ತಾವರೆನಾಯ್ಕ ಅವರ ಹೋರಿಯನ್ನು ಹುಲಿ ಕೊಂದು ತಿಂದಿದೆ. ಅದರ ಮಾಹಿತಿ ಮೇಲೆ ಹೋರಿ ಸತ್ತ ಜಾಗದಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು.

ಬೋನಿರಿಸಿದ ಕೆಲವೇ ಕ್ಷಣದಲ್ಲಿ ಮೇಕೆ ತಿನ್ನಲು ಬಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಇದೀಗ ಸೆರೆಯಾದ ಹುಲಿ ನೋಡಲು ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವಲಯದಲ್ಲಿ ಬರುವ ಕಲ್ಲಹಟ್ಟಿ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

RELATED ARTICLES

Related Articles

TRENDING ARTICLES