Sunday, January 19, 2025

ವಿಶ್ವಕಪ್ 2023 ಟೂರ್ನಿಗೆ ಸೂಪರ್​ ಸ್ಟಾರ್​ ರಜನಿಕಾಂತ್​ ವಿಶೇಷ ಅತಿಥಿ!

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ ವಿಶೇಷ ಅತಿಥಿಯಾಗಿ ಸೂಪರ್ ಸ್ಟಾರ್ ರಜನಿಕಾಂತ್ ಆಯ್ಕೆದ್ದಾರೆ . ಮುಂದಿನ ತಿಂಗಳು ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ವಿಶೇಷ ಅತಿಥಿಯಾಗಿ ತಲೈವಾ ಅವರಿಗೆ ಬಿಸಿಸಿಐ ಗೋಲ್ಡನ್ ಟಿಕೆಟ್ ನೀಡಿ ಆಹ್ವಾನಿಸಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಚೆನ್ನೈನಲ್ಲಿರುವ ರಜನಿ ಅವರ ನಿವಾಸಕ್ಕೆ ತೆರಳಿ ಈ ಗೋಲ್ಡನ್ ಟಿಕೆಟ್ ನೀಡಿದ್ದಾರೆ. ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೊಲ್ಕರ್ ಅವರಿಗೂ ಜಯ್ ಶಾ ಈ ಗೋಲ್ಡನ್ ಟಿಕೆಟ್ ನೀಡಿದ್ದಾರೆ.

ಇಬ್ಬರ ಫೋಟೋವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ದಿಗ್ಗಜ ನಟ ಭಾಷೆ ಮತ್ತು ಸಂಸ್ಕೃತಿಯನ್ನು ಮೀರಿ ಲಕ್ಷಾಂತರ ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಅದು ಹೇಳಿದೆ.

RELATED ARTICLES

Related Articles

TRENDING ARTICLES