ಬೆಂಗಳೂರು : ಹುಕ್ಕಾ ಬಾರ್, ತಂಬಾಕು ಉತ್ಪನ್ನ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿರ್ಧರಿಸಿದ್ದಾರೆ.
ಹುಕ್ಕಾ ಬಾರ್ಗಳಿಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದು ಸಿಗರೇಟ್, ತಂಬಾಕು ಉತ್ಪನ್ನ ಸೇವನೆ, ಮಾರಾಟದಿಂದ ಯುವಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರೋ ಹಿನ್ನೆಲೆ ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ ಸಹಯೋಗದಲ್ಲಿ ಹೊಸ ಪ್ಲ್ಯಾನ್ ಜಾರಿಗೆ ಸರ್ಕಾರ ಸಿದ್ದತೆ ನಡೆಸುತ್ತಿದೆ.
ಇದನ್ನೂ ಓದಿ: ವಿಶ್ವಕಪ್ 2023 ಟೂರ್ನಿಗೆ ಸೂಪರ್ ಸ್ಟಾರ್ ರಜನಿಕಾಂತ್ ವಿಶೇಷ ಅತಿಥಿ!
ಹುಕ್ಕಾ ಬಾರ್‌ಗಳಲ್ಲಿ ಮಾದಕ ವಸ್ತು ಸೇವನೆ ನಿಷೇಧಕ್ಕೆ ಕ್ರಮಕೈಗೊಳ್ಳೂವ ನಿಟ್ಟಿನಲ್ಲಿ 21 ವರ್ಷದ ಒಳಗಿನವರು ತಂಬಾಕು ಸೇವನೆ ಮಾಡುವಂತಿಲ್ಲ ಈ ಹಿಂದೆ ತಂಬಾಕು ಸೇವನೆಗೆ ಇದ್ದ ವಯಸ್ಸನ್ನು 18 ವರ್ಷದ ಬದಲು 21 ಕ್ಕೆ ಏರಿಸಲು ತೀರ್ಮಾನಿಸಿದೆ. 21 ವರ್ಷ ಮೇಲ್ಪಟ್ಟವರಿಗಷ್ಟೇ ಮಾತ್ರ ತಂಬಾಕು ಸೇವನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಫೂರಕವಾಗಿ ಕೋಕಾ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಹೇಳಿದ ಆರೋಗ್ಯ ಸಚಿವ ದಿನೇಶ್ ಗುಂಡುವಾರ್ ತಿಳಿಸಿದ್ದಾರೆ.