ಬೆಂಗಳೂರು : ಕಾವೇರಿ ವಿಚಾರವಾಗಿ ರೈತರ ಮತ್ತು ನಾಡಿನ ಜನತೆಯ ಪರ ಧ್ವನಿ ಎತ್ತದ ಕನ್ನಡದ ಸ್ಟಾರ್ ನಟರ ಭಾವಚಿತ್ರ ಹಿಡಿದು ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟಿಸಿದ ಕನ್ನಡ ಪರ ಹೋರಾಟಗಾರರ ಕುರಿತು ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್, ನಮ್ಮ ಪವರ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
ನಮ್ಮ ಪವರ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮಾ ಹರೀಶ್ ಅವರು, ಸಪ್ಟೆಂಬರ್ 23ಕ್ಕೆ ಫಿಲ್ಮ್ ಚೇಂಬರ್ ಎಲೆಕ್ಷನ್ ಇರುವ ಹಿನ್ನೆಲೆ ಇಡೀ ಉದ್ಯಮ ಅದರಲ್ಲಿ ತೊಡಗಿಕೊಂಡಿದ್ದಾರೆ. ಪೀಲ್ಮ್ ಚೇಂಬರ್ ಎಲ್ಲಕ್ಕೂ ಮಾತೃ ಸಂಸ್ಥೆ ಆಗಿದ್ದರಿಂದ ನೂತನ ಅಧ್ಯಕ್ಷ ಜೊತೆ ಇಡೀ ಇಂಡಸ್ಟ್ರಿ ಕೈ ಜೋಡಿಸಲಿದೆ ಎಂದು ಹೇಳಿದ್ಧಾರೆ.
ಇದನ್ನೂ ಓದಿ : ಕಾವೇರಿ ವಿಚಾರ: ನಟ ದರ್ಶನ್ ಟ್ವೀಟ್ ಪೊಸ್ಟ್!
ಕನ್ನಡ ನಾಡು, ನುಡಿ, ಜಲಕ್ಕಾಗಿ ಸದಾ ಚಿತ್ರರಂಗ ಮುಂದಿರುತ್ತದೆ, ಅದಕ್ಕೆ ಸಾಕಷ್ಟು ನಿದರ್ಶನಗಳು ಇವೆ. ಇನ್ನೂ ಶಿವಣ್ಣ, ರವಿ ಸರ್ ಹಾಗೂ ಸುದೀಪ್ ಅವರ ಜೊತೆ ಕಲೆಕ್ಷನ್ ಬಳಿಕ ಮಾತುಕತೆ ನಡೆಸುತ್ತೇವೆ.
ಎಲ್ಲರೂ ಒಟ್ಟಿಗೆ ಭಾಗಿಯಾಗಿ ಹೋರಾಟಕ್ಕೆ ಸಾಥ್ ನೀಡುತ್ತೇವೆ. ಅಲ್ಲದೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದಿರುವುದರಿಂದ ಅವರ ಹೇಳಿಕೆಗಳಿಂದ ಸಿನಿಮಾಗಳಿಗೂ ತೊಂದರೆಯಾಗಬಹುದು ಎಂದು ಭಾಮಾ ಹರೀಶ್ ಅವರು ಹೇಳಿದ್ಧಾರೆ