Wednesday, January 22, 2025

ಕಾವೇರಿ ವಿಚಾರ: ನಟ ದರ್ಶನ್​ ಟ್ವೀಟ್​ ಪೊಸ್ಟ್​!

ಬೆಂಗಳೂರು : ಕಾವೇರಿ ವಿಚಾರವಾಗಿ ರೈತರ ಮತ್ತು ನಾಡಿನ ಜನತೆಯ ಪರ ಧನಿ ಎತ್ತದ ಸ್ಯಾಂಡಲ್​ವುಡ್​ ನಟ ನಟಿಯರ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಟ ಚಾಲೆಂಗ್​ ಸ್ಟಾರ್​ ದರ್ಶನ್​ ಟ್ವೀಟ್​ ಮಾಡಿವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ತಮಿಳುನಾಡು ಪರವಾಗಿ ಆದೇಶಗಳನ್ನು ನೀಡುತ್ತಿದ್ದರೂ ಇದುವರೆಗೂ ಕಾವೇರಿ ಪರ ಮಾತನಾಡುತ್ತಿಲ್ಲ, ಆದರೇ, ಚುನಾವಣೆ ವೇಳೆ ರಾಜಕಾರಣಿಗಳ ಪರವಾಗಿ ಬೀದಿಗಿಳಿದು ಪ್ರಚಾರ ನಡೆಸಿತ್ತಾರೆ, ಇವರಿಗೆ ಸಾಮಾಜಿಕ ಕಳಕಳಿ ಇಲ್ಲ ಎಂಬ ಕೂಗು ಸ್ಯಾಂಡಲ್​ವುಡ್​ ಸ್ಟಾರ್​ ಗಳ ವಿರುದ್ದ ಕೇಳಿ ಬಂದಿತ್ತು.

ಇದನ್ನೂ ಓದಿ: ಕಾವೇರಿ ನೀರು ವಿಚಾರ: ಸೊಲ್ಲೆತ್ತದ ಸ್ಯಾಂಡಲ್​ವುಡ್​ ನಟ ನಟಿಯರ ವಿರುದ್ದ ಭುಗಿಲೆದ್ದ ಆಕ್ರೋಶ!

ಇದೇ ವೇಳೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕಾವೇರಿ ವಿಚಾರವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ಕಾವೇರಿ ವಿವಾದಕ್ಕೆ ಬೆಂಬಲ ಸೂಚಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ, ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ. ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES