Saturday, January 18, 2025

ಡೆತ್​ನೋಟ್ ಬರೆದು ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು : ಕಂಪನಿ ಹಣ ಪಡೆದು ವಂಚಿಸಿದ್ದ ಆರೋಪದ ಹಿನ್ನೆಲೆ ವ್ಯಕ್ತಿಯನ್ನು ಕರೆದೊಯ್ದು ಪೋಲಿಸರು ಟಾರ್ಚರ್ ಕೊಟ್ಟಿರುವುದಾಗಿ ಡೆತ್​ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ನಾಗರಾಜ್ (47) ಮೃತ ವ್ಯಕ್ತಿ. ಎಂಬ ವ್ಯಕ್ತಿ ಸನಾವುಲ್ಲಾ ಎಂಬುವರ ಇಪಿಪಿ (ENVIRONMENTAL POLLUTION PROJECT) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನನೊಂದು ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ನಾಗರಾಜ್ ಎರಡು ಪುಟದ ಡೆತ್​ನೋಟ್ ಬರೆದು, ತಮ್ಮ ಪತ್ನಿ ವಿನೂತಗೆ, ನನ್ನನ್ನು ಕ್ಷಮೀಸು ಮಗುವನ್ನು ನೋಡಿಕೊ ಎಂದು ಮೆಸೇಜ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನು ಓದಿ : ಮನೆಯ ಮಹಡಿಯಿಂದ ಬಿದ್ದು ಮಹಿಳೆ ಆತ್ಮಹತ್ಯೆ

ಇನ್ನೂ ಡೆತ್​ನೋಟ್​ನಲ್ಲಿ ನಾಗರಾಜ್ ಅವರು ತಮ್ಮ ಕಂಪನಿ ಒಡೆತನದ ಸನಾವುಲ್ಲ ಹಲವು ಜನರಿಗೆ ಹಣ ಪಡೆದು ವಂಚಿಸುತ್ತಿದ್ದರು. ಈ ಹಿನ್ನೆಲೆ ನಟರಾಜ್ ಎಂಬುವವರು ಹಣ ಪಡೆದು ವಂಚಿಸಿದ್ದಾರೆ ಎಂದು ನಾಗರಾಜ್ ಮೇಲೆ ವೈಯಾಲಿಕಾವಲ್ ಠಾಣೆಯಲ್ಲಿ ನಟರಾಜ್ ದೂರು ನೀಡಿದ್ದನು. ಈ ಪರಿಣಾಮ ಸನಾವುಲ್ಲನ ಬದಲಾಗಿ ನಾಗರಾಜ್​ನನ್ನು ಪೋಲಿಸರು ಕರೆದುಕೊಂಡು ಹೋಗಿದ್ದರು.

ಬಳಿಕ ವಿಚಾರಣೆಗೆ ಎಂದು ಕರೆದುಕೊಂಡು ಹೋಗಿ ಬೆಲ್ಟ್ ನಿಂದ ಹೊಡೆದು, ಬ್ಯಾಟ್​ನಿಂದ ಬಡಿದು ಹಾಗೂ ಶೂನಿಂದ ಒದ್ದು ನನಗೆ ಟಾರ್ಚರ್ ಮಾಡಿದ್ದಾರೆ. ಇದೇ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸನಾವುಲ್ಲಾ ,ನಟರಾಜ್, ಹಾಗೂ ಎಂ.ಸಿ ಯೆರ್ರೇಗೌಡ ಹೆಸರು ಉಲ್ಲೇಖ ಮಾಡಿ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES