ಮಂಡ್ಯ : ಫಸ್ಟ್ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ. ಯಾವ ಆಧಾರದ ಮೇಲೆ ನೀರು ಹರಿಸೋಕೆ ಹೇಳ್ತಿದ್ಧಾರೆ ಗೊತ್ತಾಗ್ತಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಕ್ರೋಶವನ್ನು ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡಲು ಪ್ರಾಧಿಕಾರ ಆದೇಶ ನೀಡಿದ್ದು, ಪ್ರಾಧಿಕಾರದ ಆದೇಶಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದವರಿಗೆ ಯಾಕೆ ವಾಸ್ತವ ಸ್ಥಿತಿ ಅರ್ಥವಾಗುತ್ತಿಲ್ಲ ಗೊತ್ತಿಲ್ಲ, ತಮಿಳುನಾಡು ಬೆಳೆ ಬೆಳೆಯಲು ನೀರು ಕೇಳ್ತಿದೆ. ಆದರೆ ನಾವು ಕುಡಿಯಲು ಕೇಳುತ್ತಿದ್ದೇವೆ ಕೃಷಿಗಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ : ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಷಯ ಹಂಚಿಕೊಂಡ ಸಂಸದೆ ಸುಮಲತಾ
ಈ ವಿಚಾರ CWMAಗೆ ಯಾಕೆ ಅರ್ಥ ಆಗ್ತಿಲ್ಲ?. ಇವರ ಆದೇಶವನ್ನು ಪಾಲಿಸಿದ್ರೆ ನೀರು ಖಾಲಿಯಾಗಿ ಬಿಡುತ್ತದೆ, ಅದರಿಂದ ತಮಿಳುನಾಡಿಗೆ ನೀರು ಬಿಡದಂತೆ ಸರ್ಕಾರ ಧೃಡ ನಿರ್ಧಾರ ಮಾಡಬೇಕು. ಈಗಾಗಲೇ 3 ಸಾವಿರ ಕ್ಯೂಸೆಕ್ ನೀರು ಹೋಗಿದೆ. ಸರ್ವಪಕ್ಷ ಸಭೆಯಲ್ಲಿ ನೀರು ಬಿಡಲ್ಲ ಅನ್ನೋ ಮಾತನ್ನ ಹೇಳಿದ್ದಾರೆ.
ಈ ಹಿನ್ನೆಲೆ ನೀರು ಬಳಸುತ್ತಿರುವ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. 21 ಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಇದ್ದು, ಕೋರ್ಟ್ ಕೂಡ CWMA ಆದೇಶವನ್ನು ಎತ್ತಿ ಹಿಡಿಯುವ ಆತಂಕ ಹೆಚ್ಚಿದೆ. ಈ ವಿಚಾರದ ಕುರಿತು ದೆಹಲಿಗೆ ತೆರಳಿ ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡಲಿದ್ದಾರೆ. ನಾವು ರೈತರ ಪರ ಇರ್ತೇವೆ ಅವರ ಜೊತೆ ಕೆಲಸ ಮಾಡ್ತೇವೆ, ಹಾಗೂ ನಮ್ಮ ಜೊತೆ ರೈತ ಸಂಘಗಳು ಒಟ್ಟಿಗೆ ಇದ್ದರೆ ಮತಷ್ಟು ಧ್ವನಿ ದೊಡ್ಡದಾಗುತ್ತದೆ. ಮುಮದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳು ಸರಿಯಾಗುತ್ತೆ ಎಂದು ಶಾಸಕ ದರ್ಶನ್ ಪುಟ್ಟಣ್ಣ ಅವರು ಹೇಳಿದ್ಧಾರೆ.