Sunday, December 22, 2024

ಹುಡುಗಿಯರಿಗೆ ಕರೆ ಮಾಡಿ ಕಾಡಿಸುತ್ತಿದ್ದ ಕಿಡಿಗೇಡಿಗೆ ಬಿತ್ತು ಭರ್ಜರಿ ಗೂಸಾ

ದಾವಣಗೆರೆ : ಹುಡುಗಿಯರಿಗೆ ಪೋನ್ ಮಾಡಿ ಕಾಡಿಸುತ್ತಿದ್ದ ರೋಡ್ ರೋಮಿಯೋಗೆ ಭರ್ಜರಿ ಗೂಸಾ ಕೊಟ್ಟಿರುವ ಯುವತಿಯರ ಕುಟುಂಬಸ್ಥರು ಘಟನೆ ನಗರದ ಎವಿಕೆ ಕಾಲೇಜ್ ಬಳಿ ನಡೆದಿದೆ.

ತ್ಯಾವಣಗಿ ಗ್ರಾಮದ ಖಾಸಗಿ ಬಸ್ ಕಂಡಕ್ಟರ್ ಆಗಿದ್ದ ವಿನಯ್ ಎಂಬ ಯುವಕ, ಮಾಯಾಕೊಂಡ ಹೋಬಳಿಯ ಗ್ರಾಮವೊಂದರ ಯುವತಿಯರಿಗೆ ಪದೇ ಪದೇ ಕರೆ ಮಾಡಿ ಅಸಭ್ಯ ವರ್ತನೆ ತೋರಿ ತೊಂದರೆ ಕೊಡುತ್ತಿದ್ದನು. ಈ ಹಿನ್ನೆಲೆ ರೋಸಿ ಹೋಗಿದ್ದ ಯುವತಿಯರು ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು.

ಇದನ್ನು ಓದಿ : ಬಾರ್ ಬೇಕೆಂದು ಪ್ರತಿಭಟನೆ ನಡೆಸಿದ ಮದ್ಯಪ್ರೀಯರು

ಬಳಿಕ ಇಂದು ಯುವತಿಯರ ಕಡೆಯವರು ಉಪಾಯ ಮಾಡಿ ಕಿಡಿಗೇಡಿ ವಿನಯ್​ನನ್ನು ಎವಿಕೆ ಕಾಲೇಜು ರಸ್ತೆಗೆ ಕರೆಸಿಕೊಂಡಿದ್ದರು. ಕುಟುಂಬಸ್ಥರು ತೋಡಿದ್ದ ಖೆಡ್ಡಾಗೆ ವಿನಯ್ ಉತ್ಸಹದಿಂದ ಬಂದು ಬಿದ್ದಿದ್ದು, ತಕ್ಷಣ ರೋಡ್ ರೋಮಿಯನನ್ನು ಹಿಡಿದು ನಡು ರಸ್ತೆಯಲ್ಲಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಡಾವಣೆಯ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಯನ್ನು ಮತ್ತೊಬ್ಬರ ಮನೆಯ ಹುಡುಗಿಯರನ್ನು ಚುಡಾಯಿಸುವ ರೋಡ್ ರೋಮಿಯೋ ಗಳು ನೋಡಲೇಬೇಕಾದ ಸ್ಟೋರಿ ಇದಾಗಿದೆ.

RELATED ARTICLES

Related Articles

TRENDING ARTICLES