ಬೆಂಗಳೂರು : ಮಹಿಳೆಯರಿಗೆ 33% ಮೀಸಲಾತಿ ಮಸೂದೆ ಮಂಡನೆ ಹಿನ್ನೆಲೆ ಇಂದಿರಾ ಗಾಂಧಿ ರಾಷ್ಟ್ರವನ್ನು ಆಳಿದ್ದಾರೆ. ಮಹಿಳೆಯರಿಗೆ ಅವಕಾಶ ಸಿಗಬೇಕು ಎಂದು ಮಾಜಿ ಸಚಿವೆ ಜಯಮಲಾ ಹೇಳಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಲಿ ಎಂದು ಕಾಯುತ್ತಿದ್ದೆವು, ಈಗ ಮಹಿಳೆಯರಿಗೆ 33% ಮೀಸಲಾತಿ ಮಸೂದೆ ಮಂಡನೆಯಾಗಿರುವುದು ತುಂಬಾ ಖುಷಿಕೊಡುತ್ತಿದೆ ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಅವಕಾಶ ಸಿಗಬೇಕು, ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ತುಂಬಾ ಖುಷಿಯಾಗುತ್ತಿದೆ. ಸೋನಿಯಾ ಮತ್ತು ರಾಜೀವ ಗಾಂಧೀಜಿ ಅವರ ಫಲ ಇದು. ಹಾಗೂ ಕರ್ನಾಟಕ 224 ಕ್ಷೇತ್ರಗಳಲ್ಲಿ ಒಬ್ಬರಿಗೋ, ಇಬ್ಬರಿಗೂ ಸಿಗುತ್ತದೆ ಅದರಿಂದ ಟಿಕೆಟ್ ಪಡೆಯಲು ಸಾಕಷ್ಟು ಕಷ್ಟ ಪಡುತ್ತಾಳೆ ಎಂದು ಹೇಳಿದ್ಧಾರೆ.
ಇದನ್ನು ಓದಿ : ನಾವು ಕುಡಿಯಲು ನೀರು ಕೇಳ್ತಿದ್ದೇವೆ, ಕೃಷಿಗಲ್ಲ; ದರ್ಶನ್ ಪುಟ್ಟಣ್ಣಯ್ಯ
ಇನ್ನೂ ಆ ಹೆಣ್ಣು ಮಕ್ಕಳನ್ನು ಸೋಲಿಸಲು ಪ್ರಯತ್ನ ಮಾಡ್ತಾರೆ. ಯಾವ ಕೆಲಸ ಕೊಟ್ಟರು ನಮ್ಮ ಹೆಣ್ಣು ಮಕ್ಕಳು ಮಾಡಿ ತೋರಿಸುತ್ತಾರೆ. ಪುರುಷ ಮನಸ್ಸು ಮೀಸಲಾತಿ ಕೊಡಲು ಇಷ್ಟಪಡುತ್ತಿರಲಿಲ್ಲ, ತಂದೆ ಮಕ್ಕಳಲ್ಲೂ ಸಹ ಅಧಿಕಾರಕ್ಕೆ ಬಂದಾಗ ಮಗಳಿಗೆ ಅವಕಾಶ ಕೊಡಲ್ಲ. ಈ ಸಕಲ್ಪ ಯಾರದ್ದೋ ಏನೋ ಒಳ್ಳೇಯದಾಗಲಿ ಎಂದು ಹೇಳಿದ್ಧಾರೆ. ಹಾಗೂ ಬಿಜೆಪಿ ಮತ್ತು ಕಾಂಗ್ರೇಸ್ ಎಂದು ಬೊಟ್ಟು ಮಾಡಲ್ಲ, ಕಾಂಗ್ರೇಸ್ ಮಾಡಲು ಹೊರಟಾಗ ಬಿಜೆಪಿ ನಿಲ್ಲಿಸಿತ್ತು. ಅವರು ಮಾಡಿದ ತಪ್ಪನ್ನು ಸರಿ ಪಡಿಸಿಕೊಳ್ಳಲಿ ಅಂದು ಯಾರು ಇದನ್ನು ವಿರೋಧಿಸಿದ್ದರೋ, ಅವರೆ ಮಂಡನೆ ಮಾಡ್ತಾ ಇದ್ದಾರೆ ಎಂದು ಮಾಜಿ ಸಚಿವೆ ಜಯಮಾಲಾ aವರು ಹೇಳಿದ್ದಾರೆ.