Sunday, December 22, 2024

ನನಗೂ ಚೈತ್ರ ಕುಂದಾಪುರ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ : ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು : ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಹಗರಣ‌ದಲ್ಲಿ ತಮ್ಮ ಹೆಸರು ತಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಈ ಪ್ರಕರಣ ಮಾಧ್ಯಮಗಳಲ್ಲಿ ಬರುವುದಕ್ಕೂ ‌ಮುನ್ನವೇ ನನಗೆ ಗೊತ್ತು. ವಜ್ರದೇಹಿ ರಾಜಶೇಕರಾನಂದ ಸ್ವಾಮೀಜಿಗಳು ನನ್ನ ಬಳಿ‌ ಹೇಳಿದ್ದರು.

ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆ ಅಕ್ರಮ: ತನಿಖೆಗೆ CM ಆದೇಶ

ವಂಚನೆಗೆ ಒಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ನನಗೂ ಆತ್ಮೀಯರು. ಆದರೆ, ವಂಚನೆ‌ ಬಗ್ಗೆ ನನಗೆ ಯಾವುದೇ ಮಾಹಿತಿ‌ ನೀಡಲಿಲ್ಲ. ಅವರ ಬಗ್ಗೆ ನನಗೆ ಬಹಳ‌ ಅನುಕಂಪವಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES