Thursday, December 26, 2024

ಸಿಸಿಬಿ ಪೊಲೀಸರಿಂದ ಚೈತ್ರ ಕುಂದಾಪುರ ವಿಚಾರಣೆ!

ಬೆಂಗಳೂರು : ನಿನ್ನೆ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಚೈತ್ರಾ ಕುಂದಾಪುರ ಅವರನ್ನು ಇಂದು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ಚೈತ್ರಾ ಕುಂದಾಪುರ ಳನ್ನು ಮಹಿಳಾ ಸ್ವಾಂತನ ಕೇಂದ್ರದಿಂದ ಸಿಸಿಬಿ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇಂದಿನಿಂದ ಮತ್ತೆ ವಿಚಾರಣೆ ಮುಂದುವರೆಯಲಿದ್ದು ಹಲವು ವಿಚಾರಗಳು ಪ್ರಸ್ತಾಪವಾಗಲಿದೆ.

ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ!: ಪತ್ನಿ ದೂರು

ಇಂದಿನ ವಿಚಾರಣೆಯಲ್ಲಿ ಚೈತ್ರಾ ಹಾಗೂ ಶ್ರೀಕಾಂತ್ ಬಳಿ ಪತ್ತೆಯಾದ ನಗದು ಹಣ, ಆಭರಣ, ಆಸ್ತಿ ಪತ್ರಗಳು, ಎಫ್ ಡಿ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ. ಉಳಿದ ಆರು ಆರೋಪಿಗಳ ಜೊತೆ ಚೈತ್ರಾ ಕುಂದಾಪುರ ಮುಖಾಮುಖಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಚೈತ್ರಾ ಹಾಗೂ ಗಗನ್ ಕಡೆ ಇನ್ನುಳಿದ ಆರೋಪಿಗಳು ಬೊಟ್ಟು ಮಾಡಿದ್ದರು ಇಂದು ನಡೆಯಲಿರುವ ವಿಚಾರಣೆಯಲ್ಲಿ ಉಳಿದ ಆರೋಪಿಗಳ ಸಮ್ಮುಖದಲ್ಲಿ ಚೈತ್ರಾ ಮುಖಾಮುಖಿ ವಿಚಾರಣೆ ನಡೆಯಲಿದೆ.

RELATED ARTICLES

Related Articles

TRENDING ARTICLES