Monday, December 23, 2024

ಬಾರ್ ಬೇಕೆಂದು ಪ್ರತಿಭಟನೆ ನಡೆಸಿದ ಮದ್ಯಪ್ರೀಯರು

ಕೊಪ್ಪಳ : ಬಾರ್ ಇಲ್ಲದ ಹಿನ್ನೆಲೆ ಗ್ರಾಮದಲ್ಲಿ ಬಾರ್ ಬೇಕೆಂದು ವಿಭಿನ್ನ ಪ್ರತಿಭಟನೆ ಮಾಡುತ್ತಿರುವ ಮದ್ಯಪ್ರೀಯರು ಘಟನೆ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಶ್ರೀ ಲಿಕ್ಕರ್ಸ್​ ಎನ್ನುವ ಮದ್ಯದ ಅಂಗಡಿ ನಿರ್ಮಾಣವಾಗುತ್ತಿತ್ತು. ಇದರಿಂದ ಗ್ರಾಮದ ಕೆಲವರು ಶ್ರೀ ಲಿಕ್ಕರ್ಸ್​ ಬಾರ್​ಗೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಗ್ರಾಮದ ಮದ್ಯಪ್ರೀಯರು ಮದ್ಯ ಅಂಗಡಿಯನ್ನು ಗ್ರಾಮದಲ್ಲಿಯೇ ಆರಂಭಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಕೂತಿದ್ದಾರೆ.

ಇದನ್ನು ಓದಿ : ಒಣಗಿದ ಬೆಳೆ, ತೀರದ ಸಾಲ, ಮನನೊಂದು ರೈತ ಆತ್ಮಹತ್ಯೆ

ನಾವು ಬೇರೆ ಕಡೆಯಿಂದ ದುಬಾರಿ ಹಣಕ್ಕೆ ಮದ್ಯ ಖರೀದಿ ಮಾಡಬೇಕು, ಇದರಿಂದ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ ಎಂದು ಮದ್ಯ ಪ್ರೀಯರು, ಬಾರ್ ಬೇಕೆ ಬೇಕೆ ಎಂದು ಘೋಷಣೆಯನ್ನು ಕೂಗುತ್ತ ಪ್ರತಿಭಟನೆ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ ಎಸಿ ಮಹೇಶ್ ಮಾಲಗಿತ್ತಿ ಅವರಿಗೆ ಮನವಿ ಸಲ್ಲಿಸಿದ್ದ ಮದ್ಯಪ್ರೀಯರು.

RELATED ARTICLES

Related Articles

TRENDING ARTICLES