Monday, December 23, 2024

ಇಂದಿನಿಂದ ಸಂಸತ್​ ಅಧಿವೇಶನ ಆರಂಭ!

ದೆಹಲಿ : ಇಂದಿನಿಂದ ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಹೀಗಾಗಿ ಎಲ್ಲಾ ಪಕ್ಷಗಳಿಂದ ಅಭಿಪ್ರಾಯ, ಸಲಹೆಗಳನ್ನು ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಶ್ರೀಲಂಕಾ ವಿರುದ್ದ ಭರ್ಜರಿ ಗೆಲುವು: ಏಷ್ಯಾಕಪ್​ ಮುಡಿಗೇರಿಸಿಕೊಂಡ ಭಾರತ!

ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸರ್ವ ಪಕ್ಷ ನಾಯಕರುಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಪಿಯೂಶ್ ಗೋಯಲ್​, ಅರ್ಜುನ್ ರಾಮ್ ಮೆಘ್ವಾಲ್, ಮುರಳೀಧರನ್ ಮತ್ತು ವಿಪಕ್ಷಗಳ ಮುಖ್ಯ ನಾಯಕರುಗಳು ಭಾಗಿಯಾಗಿದ್ದರು.

ಇನ್ನು ಇಂದಿನಿಂದ ಸೆಪ್ಟೆಂಬರ್​ 22ರವರೆಗೆ ಸಂಸತ್​ ಕಲಾಪ ನಡೆಯಲಿದೆ. ಇಂದು ಹಳೇ ಸಂಸತ್​ ಕಟ್ಟಡದಲ್ಲಿ ಅಧಿವೇಶನ ನಡೆಯಲಿದ್ದು, ಮಂಗಳವಾರದಿಂದ ನೂತನ ಸಂಸತ್​ ಭವನ ಸೆಂಟ್ರಲ್​ ವಿಸ್ತಾದಲ್ಲಿ ಅಧಿವೇಶನ ಮುಂದುವರೆಯಲಿದೆ.

RELATED ARTICLES

Related Articles

TRENDING ARTICLES