ಚಾಮರಾಜನಗರ : ಕಬ್ಬಿನ ಗದ್ದೆಯಲ್ಲಿ ಮರಿ ಚಿರತೆಗಳನ್ನು ಇಡುತ್ತಾ ಜನರಿಗೆ ಆತಂಕಕ್ಕೀಡು ಮಾಡುತ್ತಿರುವ ತಾಯಿ ಚಿರತೆ ಘಟನೆ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಪ್ರತಿನಿತ್ಯ ದಿನಕ್ಕೊಂದು ಕಬ್ಬಿನ ಗದ್ದೆಯಲ್ಲಿ ಮರಿ ಚಿರತೆಗಳನ್ನು ಇಡುತ್ತಿರುವ ಹಿನ್ನೆಲೆ ಮರಿ ಚಿರತೆಗಳ ರಕ್ಷಣೆಗಾಗಿ ಪ್ರತಿದಿನ ಬರುತ್ತಿರುವ ತಾಯಿ ಚಿರತೆ. ಈ ಪರಿಣಾಮ ಗ್ರಾಮದ ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಹಿಂಜರಿಯುತ್ತಿರುವ ರೈತರು.
ಇಷ್ಟೇಲ್ಲ ನಡೆಯುತ್ತಿದ್ದರು ಮರಿ ಚಿರತೆಗಳನ್ನು ತೆಗೆದುಕೊಂಡು ಹೋಗಲು ಮೀನಮೇಷ ಎಣಿಸುತ್ತಿರುವ ಅರಣ್ಯ ಇಲಾಖೆ. ಬೇರೆ ಎಲ್ಲ ಕಡೆ ಸಂಚರಿಸಿ ಭಯ ಹುಟ್ಟಿಸಿರುವ ಚಿರತೆ ಸೆರೆಗೆ ಬೋನು ಒಟ್ಟಿದ್ದರೂ, ಆ ಕಡೆ ಚಿರತೆ ಸುಳಿಯುತ್ತಿಲ್ಲ.
ಇದನ್ನು ಓದಿ : ಹೋಟೆಲ್ ಮಾಲೀಕನ ಮೇಲೆ ಹಲ್ಲೆ ; ಓರ್ವನ ಬಂಧನ
ಗ್ರಾಮದ ಜನರಿಗೆ ಆತಂಕ ಹೆಚ್ಚಾಗಿದ್ದು, ಚಿರತೆ ಬರುವಂತೆ ಅಗತ್ಯ ಕ್ರಮವಹಿಸಬೇಕು. ನಾವು ಪ್ರತಿನಿತ್ಯ ಜೀವ ಭಯದಲ್ಲೇ ಇದೀವಿ. ಚಿರತೆ ಸಾಯಿಸಿ ಅಂತ ಹೇಳ್ತಿಲ್ಲ ಆದರೆ ಸೆರೆ ಹಿಡಿದು ದುರ ಕರ್ಕೊಂಡ್ ಹೋಗಲಿ ಎಂದು ಹೇಳುತ್ತಿದ್ದೇವೆ. ಚಿರತೆ ದಾಳಿಯಿಂದ ಏನಾದರೂ ಸತ್ತರೆ ನಮ್ಮ ಹೆಂಡ್ತಿಗೆ ಗಂಡನ್ನ ಕೊಡ್ತಾರ್. ಅಥವಾ ಕಾಡು ಪ್ರಾಣಿಯನ್ನ ಕೊಂದ್ರೆ ನಮಗೆ ಜೈಲು ಗ್ಯಾರಂಟಿ. ಅಷ್ಟೇ ಅಲ್ಲ ಚಿರತೆ ನಮ್ಮನ್ನ ಸಾಯಿಸಿದ್ರೆ 5 ಲಕ್ಷ ಪರಿಹಾರ ಇದ್ಯಾವ ನ್ಯಾಯಾ ಸ್ವಾಮಿ ಎಂದು ಅರಣ್ಯ ಇಲಾಖೆಯವರ ಮೇಲೆ ರೈತ ಪ್ರಭುಸ್ವಾಮಿಯವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.