Monday, December 23, 2024

ಹೋಟೆಲ್ ಮಾಲೀಕನ ಮೇಲೆ ಹಲ್ಲೆ ; ಓರ್ವನ ಬಂಧನ

ಕೋಲಾರ : ಹೋಟೆಲ್ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಗರದ ಬೈರೇಗೌಡ ನಗರದಲ್ಲಿ ನಡೆದಿದೆ.

ಕಳೆದ ರಾತ್ರಿ ನಗರದ ಸಹನ ದರ್ಶಿನಿ ಹೋಟೆಲ್ ಮಾಲೀಕ ನವೀನ್ ಶೆಟ್ಟಿ ಎಂಬುವವರ ಹೋಟೆನಲ್ಲಿ ಇದ್ದ ವೇಳೆ ಬೈಕ್​ನಲ್ಲಿ ಒಂದ ಮೂರು ಜನ ದುಷ್ಕರ್ಮಿಗಳು ನವೀನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲೇ ಇದ್ದ ಸ್ಥಳೀಯರು ಸ್ಥಳಕ್ಕೆ ದೌಡಯಿಸುತ್ತಿದ್ದಂತೆ ಇಬ್ಬರು ಕಿರಾತಕರು ಹೋಟೆಲ್​ನಲ್ಲಿ ಇದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಇದನ್ನು ಓದಿ : ಶವಸಂಸ್ಕಾರ ವೇಳೆ ಹೆಜ್ಜೇನು ದಾಳಿ ; ವ್ಯಕ್ತಿ ಸಾವು, 14 ಮಂದಿಗೆ ಗಾಯ

ಆದರೆ ಒರ್ವ ಸ್ಥಳೀಯರ ಕೈಗೆ ಸಿಕ್ಕಿದ್ದು, ಅವನಿಗೆ ಚನ್ನಾಗಿ ಥಳಿಸಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಗಾಯಳು ನವೀನ್​ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ನಗರ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.

RELATED ARTICLES

Related Articles

TRENDING ARTICLES