Wednesday, January 22, 2025

ಎಗ್ಗರೈಸ್, ಕಬಾಬ್ ಇಲ್ಲ ಎಂದಿದ್ದೆ ತಪ್ಪಾಯ್ತಾ? ; ಮಾಲೀಕನ ಹತ್ಯೆ

ಬಾಗಲಕೋಟೆ : ಎಗ್ಗರೈಸ್, ಚಿಕನ್ ಕಬಾಬ್ ಖಾಲಿ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಹತ್ಯೆಗೈದಿರುವ ಘಟನೆ ಹುನಗುಂದ ತಾಲ್ಲೂಕಿನ ಅಮೀನಗಡ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ.

ಗೈಬುಸಾಬ್ ಮುಲ್ಲಾ (34) ಮೃತ ದುರ್ದೈವಿ. ಎಂಬಾತ ಅಮೀನಗಡ ಬಸ್ ನಿಲ್ದಾಣದ ಬಳಿ ಎಗ್ಗರೈಸ್ ಅಂಗಡಿ ಇಟ್ಟುಕೊಂಡಿದ್ದನು. ನಿನ್ನೆ ರಾತ್ರಿ ಮುಸ್ತಾಕ್ ಜಂಗಿ (20) ಕೊಲೆ ಮಾಡಿದ ಆರೋಪಿ. ಎಂಬುವನು ಗೈಬುಸಾಬ್ ಅವರ ಅಂಗಡಿಗೆ ಬಂದು ಎಗ್ಗರೈಸ್ ಮತ್ತು ಕಬಾಬ್ ಕೇಳಿದ್ದಾನೆ. ಬಳಿಕ ಮಾಲೀಕ ಇಲ್ಲ ಎಲ್ಲ ಖಾಲಿಯಾಗಿದೆ ಎಂದು ಹೇಳಿದ್ದಾನೆ.

ಇದನ್ನು ಓದಿ : ಚಿರತೆಯ ಚೆಲ್ಲಾಟ ರೈತರಿಗೆ ಪ್ರಾಣ ಸಂಕಟ

ಮಾಲೀಕ ಖಾಲಿ ಎಂದಿದ್ದೆ ತಡ ಗೈಬುಸಾಲ್​ಗೆ ಚಾಕುವಿನಿಂದ ಹತ್ಯೆಗೈದಿದ್ದಾನೆ. ಈ ಹಿಂದೆಯೂ ಆರೋಪಿ ಮುಸ್ತಾಕ್ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದನು. ಈಗ ಮತ್ತೆ ಅದೇ ತಪ್ಪು ಮಾಡಿ ವ್ಯಕ್ತಿಯ ಪ್ರಾಣವನ್ನು ತಗೆದಿದ್ದಾನೆ.

ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಬಗ್ಗೆ ಅಮೀನಗಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES