ಹಾಸನ : ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಹಠಾತ್ ಸಾವನ್ನಪ್ಪಿರುವ ಘಟನೆ ಬೇಲೂರು ಪಟ್ಟಣದ ತಾಲೂಕು ಆಸ್ಟತ್ರೆಯಲ್ಲಿ ನಡೆದಿದೆ.
ಗ್ರಾಮದ ಶಿವಣ್ಣ (60) ಮೃತ ದುರ್ದೈವಿ. ಎಂಬ ವ್ಯಕ್ತಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ಧಾರೆ. ಈ ಘಟನೆ ಹಿನ್ನೆಲೆ ಮೃತರ ಸಂಬಂಧಿಕರು ಎದೆ ನೋವಿನಿಂದ ಆಸ್ಪತ್ರೆಗೆ ಬಂದಾಗ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪ ಮಾಡಿದ್ದು, ಅರವಳಿಕೆ ತಜ್ಞ ಡಾ. ಹರ್ಷ ಅವರನ್ನು ಅಮಾನತು ಮಾಡುವಂತೆ ಆಸ್ಪತ್ರೆಯ ಎದುರು ಕೂತು ಪ್ರತಿಭಟನೆಯನ್ನು ಮಾಡಿದ್ಧಾರೆ.
ಇದನ್ನು ಓದಿ : ಎಗ್ಗರೈಸ್, ಕಬಾಬ್ ಇಲ್ಲ ಎಂದಿದ್ದೆ ತಪ್ಪಾಯ್ತಾ? ; ಮಾಲೀಕನ ಹತ್ಯೆ
ಈ ಪರಿಣಾಮ ಘಟನಾ ಸ್ಥಳಕ್ಕೆ ಡಿಎಚ್ಓ ಡಾ. ಶಿವಸ್ವಾಮಿ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಬಳಿಕ ಮೇಲ್ನೋಟಕ್ಕೆ ವೈದ್ಯನ ಕರ್ತವ್ಯದ ಲೋಪ ಸಾಬೀತು ಆಗಿದ್ದ ಹಿನ್ನೆಲೆ ಡಾ. ಹರ್ಷರವರನ್ನು ಅಮಾನತುಗೊಳಿಸಲು ಆದೇಶ ನೀಡಿದರು. ಇನ್ನೂ ತಾಲೂಕು ವೈದ್ಯಾಧಿಕಾರಿ ಹಾಗೂ ರಾತ್ರಿ ಕರ್ತವ್ಯದಲ್ಲಿದ್ದ ನರ್ಸ್ಗೆ ನೋಟಿಸ್ ನೀಡುವ ಬಗ್ಗೆ ಮಾಹಿತಿ ಕೂಡ ನೀಡಿದರು.
ಈ ಘಟನೆ ಬಗ್ಗೆ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರು ಹೋರಾಟ ನಿರತರ ಪರ ನಿಂತು ವೈದ್ಯರ ನಿರ್ಲಕ್ಷದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಸೂಚಿಸಿ ಹೋರಾಟವನ್ನು ಹಿಂಪಡಿಯಲು ಮೃತರ ಸಂಬಂಧಿಕರಿಗೆ ಮನವಿಯನ್ನು ಮಾಡಿಕೊಂಡರು. ಡಾ. ಹರ್ಷ ಅವರ ಅಮಾನತು ಮಾಡುತ್ತಿದ್ದಂತೆ ಪ್ರತಿಭಟನೆ ಹಿಂಪಡೆದು, ಶಿವಣ್ಣನ ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋದರು.