Sunday, December 22, 2024

ಮದುವೆ ಬಳಿಕ ಎಸ್ಕೇಪ್ ಆದ ಪತ್ನಿ: ಪೋಲಿಸ್ ಠಾಣೆ ಮೆಟ್ಟಿಲೇರಿದ ಗಂಡ

ಬೆಂಗಳೂರು : ಫೇಸ್​ಬುಕ್​ನಲ್ಲಿ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿದ್ದು ಇಬ್ಬರು ಮದುವೆಯಾಗಿದ್ದಾರೆ. ಬಳಿಕ ಮದುವೆಯಾಗಿ ಕೇವಲ ಮೂರು ತಿಂಗಳಲ್ಲೇ ಪತ್ನಿ ಗಂಡನನ್ನು ಬಿಟ್ಟು ಎಸ್ಕೇಪ್ ಆಗಿರುವ ಘಟನೆ ನಗರದ ಚಂದ್ರಲೇಔಟ್​ನಲ್ಲಿ ನಡೆದಿದೆ.

ನಗರದ ಚಂದ್ರಲೇಔಟ್​ನ ನಿವಾಸಿ ಸಂತೋಷ ಎಂಬುವವನಿಗೆ ಫೇಸ್​ಬುಕ್ ಮೂಲಕ ಒರ್ವ ಮಹಿಳೆ ಪರಿಚಯವಾಗಿದ್ದು, 2018 ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಮಹಿಳೆಗೆ ಕೆಲಸ ಕೊಡಿಸಿದ್ದನು. ಬಳಿಕ ಇದೇ ಪರಿಚಯದ ಮೇರೆಗೆ ಸಂತೋಷ್ ಮತ್ತು ಮಹಿಳೆ ನಡುವೆ ಪ್ರೇಮಾಂಕುರವಾಗಿದ್ದು, ಬಳಿಕ ಮದುವೆಯಾಗಲು ನಿರ್ಧರಿಸಿದ್ದ ಜೋಡಿ ಹಕ್ಕಿಗಳು.

ಇದನ್ನು ಓದಿ : ಮಗನ ಶೋಕಿಗೆ ಕುಮ್ಮಕ್ಕು ನೀಡಿದ ಆರೋಪ: ಪಿಎಸ್​ಐ ಯಾಸ್ಮಿನ್​ ತಾಜ್​ ವರ್ಗಾವಣೆ!

ಆದರೆ ಆ ಮಹಿಳೆಗೆ ಈ ಮೊದಲೆ ಬೇರೊಬ್ಬನ ಜೊತೆ ಮದುವೆಯಾಗಿದ್ದು, ಆ ವಿಚಾರವನ್ನು ಮುಚ್ಚಿಟ್ಟು ಸಂತೋಷ ಜೊತೆ ಮದುವೆಯಾಗಿದ್ದಳು. ಅಷ್ಟೇ ಅಲ್ಲ ಮಹಿಳೆಯ ಅಕ್ಕ ಮತ್ತು ಬಾವ ಕೂಡ ಇದರಲ್ಲಿ ಶಾಮಿಲ್ ಅಗಿದ್ದರು. ಅಮಾಯಕ ಯುವಕನ ಜೊತೆ ಮಹಿಳೆಯ ಮದುವೆ ಮಾಡಿಸಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದರು. ಬಳಿಕ ನಾದಿನಿ ಜೊತೆ ಮದುವೆ ಮಾಡಿಸಲು ಐದು ಲಕ್ಷ ಪೀಕಿದ ಮಹಿಳೆಯ ಬಾವ. ಹಾಗೂ ಅವಳ ಅಕ್ಕ ಕೂಡ ಸಂತೋಷ ಬಳಿ 15 ಲಕ್ಷ ಮೌಲ್ಯದ ಆಭರಣಗಳನ್ನು ಮದುವೆಗೆ ಮಾಡಿಸಿಕೊಂಡಿದ್ದಳು.

ಬಾವ ಅಕ್ಕನ ಸರದಿಯಾಗುತ್ತಿದ್ದಂತೆ ಮಹಿಳೆಯು ಮದುವೆ ಮುಂಚೆ ಐಪೋನ್ ಡಿಮಾಂಡ್ ಮಾಡಿದ್ದರಿಂದ, ಮನ ಮೆಚ್ಚಿದ ಹುಡುಗಿಗೊಸ್ಕರ 2.60 ಲಕ್ಷ ಮೌಲ್ಯದ ಐಪೋನ್ ಕೊಡಿಸಿದ್ದ ಯುವಕ. ಇದೆಲ್ಲ ಮುಗಿದ ಬಳಿಕ 2022 ರಂದು ನವೆಂಬರ್​ನಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಮದುವೆಯಾಗಿದ್ದ ಜೋಡಿ. ಮದುವೆ ಬಳಿಕ ಮೂರು ತಿಂಗಳ ಬಳಿಕ ಮಹಿಳೆ ಸಂತೋಷ ನನ್ನು ಬಿಟ್ಟು ಪರಾರಿಯಾಗಿದ್ದಾರೆ. ಮಹಿಳೆಯ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಯುವಕ ಮದುವೆಯಾದ್ರು ದೈಹಿಕ ಸಂಪರ್ಕ ಕೊಡದೆ ಮೋಸ ಮಾಡಿದ್ದಾರೆ ಎಂದು ದೂರು ನೀಡಿರುವ ಯುವಕ.

ಅಲ್ಲದೇ ಮಹಿಳೆ ಎಸ್ಕೇಪ್ ಆದ ನಂತರವು ಮಹಿಳೆಯ ಬಾವ ಹಣ ಪೀಕಿದ ಎಂದು ಅಕ್ಕ ಬಾವನ ವಂಚನೆ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಸಂತೋಷ್. ಈ ದೂರಿನ ಹಿನ್ನೆಲೆ ಮಹಿಳೆ, ಆಕೆಯ ಅಕ್ಕ ಮತ್ತು ಬಾವ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES