Wednesday, January 22, 2025

ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ; ಸಹದ್ಯೋಗಿ ವಿರುದ್ಧ FIR ದಾಖಲು

ಬೆಂಗಳೂರು : ಮಹಿಳಾ ಟೆಕ್ಕಿಗೆ ಕೆಲಸದ ವೇಳೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ ಕಂಪನಿಯ ಹಿರಿಯ ಸಹದ್ಯೋಗಿ ವಿರುದ್ಧ FIR ದಾಖಲಾಗಿರುವ ಘಟನೆ ಎಂ.ಜಿ ರಸ್ತೆ ಸಮೀಪದ ವಿದೇಶಿ ಮೂಲದ ಕಂಪನಿಯಲ್ಲಿ ನಡೆದಿದೆ.

ಪ್ರೇಮ್ ಚಂದರ್ ಎಂಬಾತ ಮೇಗ್ರಾಥ್ ರಸ್ತೆಯಲ್ಲಿರುವ ವಿದೇಶಿ ಮೂಲದ ಲಿಬ್ರೆವೈರ್ ಲೆಸ್ ಟೆಕ್ನಾಲಜೀಸ್ ಪ್ರೇವೈಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅದೇ ಕಂಪನಿಯಲ್ಲಿ ಕಳೆದ ಒಂದು ವರ್ಷದಿಂದ ಸಂತ್ರಸ್ಥ ಯುವತಿ ಕೆಲಸ ಮಾಡುತ್ತಿದ್ದರು.

ಇದನ್ನು ಓದಿ : ಸಿಲಿಕಾನ್ ಸಿಟಿಯಲ್ಲಿ ಗರಿಗೆದರಿದ ಗೌರಿ ಗಣೇಶ ಹಬ್ಬದ ವ್ಯಾಪಾರ

ಪ್ರೇಮ ಚಂದರ್ ಕೆಲಸದ ವೇಳೆ ಸಂತ್ರಸ್ಥ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಈ ಹಿನ್ನೆಲೆ ಸಂತ್ರಸ್ಥ ಯುವತಿಯು ಹಿರಿಯ ಸಹದ್ಯೋಗಿಯ ಕಿರುಕುಳದಿಂದ ಬೇಸತ್ತ ಯುವತಿ, ಪ್ರೇಮ್ ಚಂದರ್ ವಿರುದ್ಧ ಹಲಸೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಿದ್ಧಾಳೆ. ಸಂತ್ರಸ್ಥ ಯುವತಿಯ ದೂರನ್ನು ಆಧರಿಸಿ ಆರೋಪಿ ಪ್ರೇಮ್ ಚಂದರ ವಿರುದ್ಧ FIR ದಾಖಲಿಸಿದ ಪೋಲಿಸರು.

RELATED ARTICLES

Related Articles

TRENDING ARTICLES