Wednesday, January 22, 2025

ಹಾಸ್ಟಲ್ ಕಾವಲುಗಾರನಿಂದ ಹಾಸ್ಟಲ್ ವಿದ್ಯಾರ್ಥಿಗೆ ಥಳಿತ

ಬಳ್ಳಾರಿ : ಹಾಸ್ಟಲ್ ಗೇಟ್ ಕಾವಲುಗಾರನೊಬ್ಬ ಹಾಸ್ಟಲ್ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿರುವ ಘಟನೆ ನಗರದ ಮಯೂರು ಹೋಟಲ್ ಹಿಂಭಾದಿಯಲ್ಲಿರುವ ಎಸ್ಸಿ, ಎಸ್ಟಿ ಹಾಸ್ಟಲ್​ನಲ್ಲಿ ನಡೆದಿದೆ.

ಎಸ್ಸಿ, ಎಸ್ಟಿ ಹಾಸ್ಟಲ್ ಹೊರಗುತ್ತಿಗೆ ನೌಕರ ಮನೋಹರ್ ಪಾಟೀಲ್ ವಿದ್ಯಾರ್ಥಿಗೆ ತಳಿಸಿದ ವ್ಯಕ್ತಿ. ಎಂಬ ವ್ಯಕ್ತಿಯು 9 ನೇ ತರಗತಿಯ ದಿವಾಕರ ಎಂಬ ವಿದ್ಯಾರ್ಥಿಯನ್ನು ಕೈ, ಕಾಲು ಬೆನ್ನಿಗೆ ಬಾಸುಂಡೆ ಬರುವಂತೆ ಕಟ್ಟಿಗೆಯಿಂದ ಥಳಿದ್ದಾನೆ.

ಇದನ್ನು ಓದಿ : ಸಕ್ಕರೆನಾಡಲ್ಲಿ ವಿಶೇಷವಾಗಿ ತಯಾರಾದ ಬೆಲ್ಲದ ಗೌರಿ-ಗಣೇಶ ಮೂರ್ತಿ

ಕಟ್ಟಿಗೆಯ ಹೊಡೆತದ ಪರಿಣಾಮದಿಂದ ವಿದ್ಯಾರ್ಥಿಯ ಕೈ ಮುರಿದು ಹೋಗಿದೆ. ಅಷ್ಟೇ ಅಲ್ಲ ಪಾಪಿ ಕಾವಲುಗಾರ ದಿವಾಕರನ ಎದೆಯ ಭಾಗಕ್ಕೆ ಕಾಲಿನಿಂದ ಹೊದ್ದಿದ್ದ, ಕಾರಣ ಏರು ಧ್ವನಿಯಲ್ಲಿ ಮಾತನಾಡಲು ವಿದ್ಯಾರ್ಥಿಗೆ ತುಂಬಾ ತೊಂದರೆ ಆಗಿದೆ.

ಸದ್ಯ ವಿದ್ಯಾರ್ಥಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಮಗನ ಈ ಪರಿಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕಿದ್ದಾರೆ. ಈ ಘಟನಾ ಸಂಬಂಧ ಪೊಲೀಸ್ ಠಾಣೆ ಮೇಟ್ಟಿಲೇರಿದ ವಿದ್ಯಾರ್ಥಿ ಪೋಷಕರು.

RELATED ARTICLES

Related Articles

TRENDING ARTICLES