Monday, December 23, 2024

ಜವಾನ್​​ ಭಾಗ 2ರ ಬಗ್ಗೆ ನಿರ್ದೇಶಕ ಅತ್ಲಿ ಹೇಳಿದ್ದೇನು ಗೊತ್ತಾ ?

ಮುಂಬೈ: ಇದೇ ಮೊದಲಬಾರಿಗೆ ಬಾಲಿವುಡ್​ ಅಂಗಳದಲ್ಲಿ ಜವಾನ್​ ಸಿನಿಮಾಗೆ ಆಕ್ಷನ್​ ಕಟ್​ ಹೇಳುವ ಮೂಲಕ ಭರ್ಜರಿ ವಿಜಯ ಸಾಧಿಸುವ ಮೂಲಕ ಯಶಸ್ಸಿನ ಉತ್ತುಂಗದಲ್ಲಿರುವ ಸ್ಟಾರ್​ ನಿರ್ದೇಶಕ ಅತ್ಲಿ ಕುಮಾರ್​ ಜವಾನ್​ ಸಿನಿಮಾದ ಭಾಗ ಎರಡರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬಾಲಿವುಡ್​ ಕಿಂಗ್​ ಶಾರುಕ್​ ಖಾನ್​ ಮತ್ತು ನಿರ್ದೇಶಕ ಅತ್ಲಿ ಕುಮಾರ್​ ಕಾಂಬಿನೇಷನ್​ನಲ್ಲಿ ತೆರೆಗೆ ಅಪ್ಪಳಿಸಿದ ‘ಜವಾನ್’​, ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿಸಿದಂತೆ ಉತ್ತಮ ಕಲೆಕ್ಷನ್​ ಮಾಡಿದೆ. ಈ ಮಧ್ಯೆ ಕೇಳಿಬಂದ ‘ಜವಾನ್​ 2’ ಬಗ್ಗೆ ಚಿತ್ರದ ನಿರ್ದೇಶಕರು ಇದೀಗ ಕುತೂಹಲದ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ

ಇದನ್ನೂ ಓದಿ: ಕಾರು ಭಸ್ಮ.. ನಿವೃತ್ತ ಯೋಧ ಸ್ಥಳದಲ್ಲೇ ಸಾವು

‘ಜವಾನ್’ ಸಿನಿಮಾ ತೆರೆ ಕಂಡ ನಂತರ ಶಾರೂಖ್​ ಖಾನ್​ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜವಾನ್​ ಸಿನಿಮಾಗೆ ಸೀಕ್ವೆಲ್ ಇರಲಿದೆಯೇ, ‘ಜವಾನ್​ 2’ ಬರಲಿದೆಯೇ ಎಂಬ ಒಂದಷ್ಟು ಪ್ರಶ್ನೆಗಳನ್ನು ಶಾರೂಖ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ನಿರ್ದೇಶಕರಿಂದ ಇದೀಗ ಉತ್ತರವೊಂದು ಲಭಿಸಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾದ ಬಗ್ಗೆ ಮಾತನಾಡಿದ ಅಟ್ಲಿ, “ಜವಾನ್​ ಸೀಕ್ವೆಲ್ ಮಾಡಲು ಯೋಜಿಸುತ್ತಿದ್ದೇನೆ. ಶಾರುಖ್ ಖಾನ್ ಅಭಿನಯದ ವಿಕ್ರಮ್​ ರಾಥೋಡ್​ ಪಾತ್ರದ ಮೇಲೆ ಹೆಚ್ಚು ಒತ್ತು ಕೊಡಲಾಗುವುದು” ಎಂದು ಹೇಳಿದರು.

RELATED ARTICLES

Related Articles

TRENDING ARTICLES