Monday, December 23, 2024

ಸಕ್ಕರೆನಾಡಲ್ಲಿ ವಿಶೇಷವಾಗಿ ತಯಾರಾದ ಬೆಲ್ಲದ ಗೌರಿ-ಗಣೇಶ ಮೂರ್ತಿ

ಮಂಡ್ಯ : ಸಕ್ಕರೆ ನಾಡಲ್ಲಿ ಗಣೇಶ ಹಬ್ಬದ ಹಿನ್ನೆಲೆ ಬೆಲ್ಲದ ಅಚ್ಚಿನಿಂದ ಕಂಗೋಳಿಸುತ್ತಿರುವ ಹಳುವಾಡಿ ಗ್ರಾಮದ ಆಲೆಮನೆಯಲ್ಲಿ ತಯಾರಾದ ಗಣೇಶನ ಬೆಲ್ಲದ ಮೂರ್ತಿಗಳು.

ಗೌರಿ ಗಣೇಶ ಹಬ್ಬದ ಹಿನ್ನೆಲೆ ಈ ಬಾರಿ ಬೆಲ್ಲದ ಗಣೇಶ ತಯಾರಿಸಿ ಮಂಡ್ಯ ಬೆಲ್ಲಕ್ಕೆ ಮತ್ತೊಂದು ಬ್ರ್ಯಾಂಡ್‌ ರೂಪ ಕೊಟ್ಟ ವಿಕಾಸನ ಸಂಸ್ಥೆ. ಈ ಭಾರಿ ಮಂಡ್ಯದ ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಬೆಲ್ಲದಿಂದ ಗಣೇಶ ಮೂರ್ತಿ ತಯಾರಿಸಲು ಪ್ರೇರಣೆಯಾಗಿದೆ. ರಾಸಾಯನಿಕ ಮುಕ್ತ ಮಂಡ್ಯ ಬೆಲ್ಲದಲ್ಲಿ ತಯಾರಿಸುವ ರೈತ ಉತ್ಪಾದಕರಿಂದ ವಿಶೇಷ ಪ್ರಯತ್ನವನ್ನು ಮಾಡಿದ್ದಾರೆ. ಈ ಹಿನ್ನೆಲೆ ಬೆಲ್ಲ’ದಲ್ಲಿ ತಯಾರಾದ ಗೌರಿ-ಗಣೇಶ ಮೂರ್ತಿಗಳಿಗೆ ಅಪಾರ ಬೇಡಿಕೆಯು ಉಂಟಾಗಿದೆ.

ಇದನ್ನು ಓದಿ : ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ; ಸಹದ್ಯೋಗಿ ವಿರುದ್ಧ FIR ದಾಖಲು

ಪರಿಸರ ಸ್ನೇಹಿ ಗಣೇಶನನ್ನು ಬೆಲ್ಲ ಅಚ್ಚು ಬಳಸಿ ಮೂರ್ತಿಗಳನ್ನು ತಯಾರು ಮಾಡಿದ್ದರಿಂದ ಮೂರ್ತಿಗಳಿಗೆ 500 ರಿಂದ 2,000 ವರೆಗೆ ಬೆಲೆ ನಿಗದಿ ಮಾಡಲಾಗಿದೆ. ವಿಕನಸ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಹೇಶ್‌ಚಂದ್ರ ಗುರು ನೇತೃತ್ವದಲ್ಲಿ ವಿಶೇಷವಾಗಿ ಮೂಲಕ ಬೆಲ್ಲದಿಂದ ಗಣೇಶ ಮೂರ್ತಿ ತಯಾರಿಸಲು ಪ್ರೇರಣೆಯಾಗಿದೆ.

ಅಷ್ಟೇ ಅಲ್ಲ ಬೆಲ್ಲದ ಗಣೇಶನನ್ನು ವಿಸರ್ಜನೆ ಮಾಡದೆ ಪ್ರಸಾದವಾಗಿ ಎಲ್ಲರೂ ಸೇವಿಸಬಹುದು. ಇಲ್ಲ ಎಂದರೆ ಕೆರೆ-ಕಟ್ಟೆಗಳಿಗೆ ವಿಸರ್ಜನೆ ಮಾಡಿದರೆ ಜೀವಿಗಳಿಗೆ ಅನುಕೂಲ ವಾಗುತ್ತಿದೆ. ಏಕೆಂದರೆ ಬೆಲ್ಲ ಎಂದೊಡನೆ ಇರುವೆಗಳು ಸಾಮಾನ್ಯ ಇರುವೆಗಳು ಮೂರ್ತಿಯ ಹತ್ತಿರ ಸುಳಿಯದಂತೆ ಬೆಲ್ಲದ ಪಾಕಕ್ಕೆ ಅರಿಸಿನ ಪುಡಿ ಬೆರಸಿ ಮೂರ್ತಿ ತಯಾರು ಮಾಡಲಾಗಿದೆ.

ಪರಿಸರ ಸ್ನೇಹಿ ಬೆಲ್ಲದ ಗಣೇಶ ಮಾರಾಟಕ್ಕೆ ಜಿಲ್ಲಾಡಳಿತದಿಂದ ಮೆಚ್ಚುಗೆ ಸಹ ನೀಡಿದ್ದಾರೆ. ಈ ಬೆಲ್ಲದ ಅಚ್ಚಿನಿಂದ ಪರಿಸರ ಸ್ನೇಹಿ ಬೆಲ್ಲದ ಮೂರ್ತಿಗಳಿಗೆ ಹೊರ ಜಿಲ್ಲೆಗಳಿಂದಲೂ ಬೇಡಿಕೆಗಳು ಹೆಚ್ಚಾಗಿವೆ.

RELATED ARTICLES

Related Articles

TRENDING ARTICLES