ಬೆಂಗಳೂರು : ಗೌರಿ- ಗಣೇಶನ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರು ಬಿಟ್ಟು ಊರುಗಳತ್ತ ಹೊರಟಿರೋ ಜನರು.
ಗಣೇಶ ಹಬ್ಬದ ಹಿನ್ನೆಲೆ ಎಲ್ಲಾ ಕಡೆಯಲು ಸಾಲು ಸಾಲು ರಜೆಗಳನ್ನು ಕೊಟ್ಟಿರುವ ಹಿನ್ನೆಲೆ ಬೆಂಗಳೂರಿನ ಜನರು ತಮ್ಮ ತಮ್ಮ ಕೆಲಸಗಳನ್ನು ಮುಗಿಸಿ ತಮ್ಮ ತಮ್ಮ ಊರುಗಳತ್ತ ಹೊರಟಿದ್ದಾರೆ. ಇದರಿಂದ ಮೆಜೆಸ್ಟಿಕ್ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಜನವೋ ಜನ.
ಹಬ್ಬ ಹತ್ತಿರ ಬರುತ್ತಿರುವುದರಿಂದ 1200 ಕ್ಕೂ ಹೆಚ್ಚುವರಿ ಬಸ್ಗಳನ್ನು ಬಿಟ್ಟಿದ್ದರು. ಆದ್ರೂ ಸಹ ಶಕ್ತಿ ಯೋಜನೆ ಎಫೆಕ್ಟ್ನಿಂದ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಅಷ್ಟೇ ಅಲ್ಲ ವೀಕೆಂಡ್ ಹಬ್ಬದ ಹಿನ್ನೆಲೆ ಬಸ್ ನಿಲ್ದಾಣಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ.
ಇದನ್ನು ಓದಿ : ಮಹಿಳಾ ಪಿಎಸ್ಐ ಪುತ್ರನ ಪುಂಡಾಟಕ್ಕೆ ಅಮಾಯಕ ಬಲಿ
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೆಲ ರೂಟ್ ಬಸ್ಗಳಿಗೆ ಸಂಚಾರ ನಡೆಸ್ತಿರೋ ಬಿಎಂಟಿಸಿ ಬಸ್ಗಳು. ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಿಎಂಟಿಸಿ ಓಡಾಟ ಮಾಡುತ್ತಿದ್ದು, ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಿಗೆ ಬಿಎಂಟಿಸಿ ಬಸ್ ಸಂಚಾರವಾಗುತ್ತಿದೆ. ಇನ್ನೂ ತುರುವೇಕೆರೆ ಹಾಗೂ ತುಮಕೂರು ರೂಟ್ ಬಸ್ಗಳಲ್ಲಿ ಸೀಟ್ ಹಿಡಿಯಲು ಜನರು ಸರ್ಕಸ್ ಮಾಡುತ್ತಿದ್ದಾರೆ. ಅದರಿಂದ ಬಂದ ಬಸ್ಗಳೆಲ್ಲ ಹೌಸ್ ಫುಲ್.