Wednesday, September 17, 2025
HomeUncategorizedಸರಳ ದಸರಾ ಆಚರಣೆಗೆ ಒತ್ತು!: ಅನಗತ್ಯ ಖರ್ಚಿಗೆ ಕಡಿವಾಣ : ಸಚಿವ ಮಹದೇವಪ್ಪ

ಸರಳ ದಸರಾ ಆಚರಣೆಗೆ ಒತ್ತು!: ಅನಗತ್ಯ ಖರ್ಚಿಗೆ ಕಡಿವಾಣ : ಸಚಿವ ಮಹದೇವಪ್ಪ

ಮೈಸೂರು : ಈ ವರ್ಷ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಭೀಕರ ಬರಗಾಲ ಆವರಿಸಿದ್ದು, ವಿಜೃಂಭಣೆಯಿಂದ ಆಚರಿಸಬೇಕಿದ್ದ ಮೈಸೂರು ದಸರಾಗೆ ಸರ್ಕಾರ ಅನಗತ್ಯ ವೆಚ್ಚಕ್ಕೆ ಈ ಬಾರಿ ಕಡಿವಾಣ ಹಾಕಿದೆ.

ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಈ ವರ್ಷ ಜುಲೈನಲ್ಲಿ ದಸರಾವನ್ನು ಅದ್ಧೂರಿಯಾಗಿ ಆಯೋಜಿಸಲು ಉನ್ನತ ಮಟ್ಟದ ಸಮಿತಿ ನಿರ್ಧರಿಸಿದಾಗ ರಾಜ್ಯವು ಬರಗಾಲವನ್ನು ಎದುರಿಸಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದ್ದು, ಅನಗತ್ಯ ಖರ್ಚು ಕಡಿಮೆ ಮಾಡುವತ್ತ ಗಮನ ಹರಿಸಲಾಗಿದೆ. ನಾವು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ವೆಚ್ಚವನ್ನು ಕಡಿತಗೊಳಿಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದರು.

ಇದನ್ನೂ ಓದಿ : ಡೇಟ್​ ಗೆ ಸಹಕರಿಸಿದರೇ ಮಾತ್ರ ಸಾಲ ಬಿಡುಗಡೆ: ಸಿಬ್ಬಂದಿಗೆ ಮಹಿಳೆ ಚಪ್ಪಲಿ ಏಟು!

ಮೈಸೂರಿನಲ್ಲಿ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ವಿಶೇಷವಾಗಿ ಹೌದಾ ಹೊತ್ತ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ. ಅಕ್ಟೋಬರ್ 15 ರಂದು ದಸರಾ ಮಹೋತ್ಸವವನ್ನು ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದರು.

ಕಳೆದ ವರ್ಷ, ರಾಜ್ಯ ಸರ್ಕಾರವು ದಸರಾ ಕಾರ್ಯಕ್ರಮಗಳು, ದೀಪಗಳು ಮತ್ತು ಇತರ ಖರ್ಚುಗಳನ್ನು ಒಳಗೊಂಡಂತೆ 26 ಕೋಟಿ ರೂಪಾಯಿ ವೆಚ್ಚ ಮಾಡಿ ಭವ್ಯ ದಸರಾವನ್ನು ಆಯೋಜಿಸಿತ್ತು. ಕೋವಿಡ್ ನಂತರ ನಡೆದ ಅದ್ದೂರಿ ದಸರಾವಾಗಿತ್ತು. ಆದರೆ ಈ ವರ್ಷ ಮತ್ತೆ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದು ಸರ್ಕಾರ ಸಾಂಪ್ರದಾಯಿಕವಾಗಿ ಸರಳವಾಗಿ ಆಚರಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments