Wednesday, January 22, 2025

ಸ್ವಾಮಿ ವಿವೇಕನಂದರವರಿಗೆ ಅವಮಾನ; ವಿದ್ಯಾರ್ಥಿ ಅಮಾನತ್ತು

ಕಲಬುರಗಿ : ಸ್ವಾಮಿ ವಿವೇಕಾನಂದ ಅವರ ಭಾವಚಿತ್ರವನ್ನು ಡಸ್ಟ್​ಬಿನ್​ಗೆ ಅಂಟಿಸಿ ಅವಮಾನ ಮಾಡಿದ್ದ ಯುವಕನನ್ನು ಅಮಾನತ್ತು ಮಾಡಲು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಜಿಲ್ಲೆಯ ಕೇಂದ್ರಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದರ್ಶ ಎಂಬ ವಿದ್ಯಾರ್ಥಿ. ಕೇಂದ್ರಿಯ ವಿವಿಯ ಭೀಮಾ ಹಾಸ್ಟೆಲ್ ನ ಗೋಡೆಯ ಮೇಲೆ ಅಂಟಿಸಿದ್ದ ಸ್ವಾಮಿ ವಿವೇಕನಂದ ಅವರ ಭಾವಚಿತ್ರವನ್ನು ಕಿತ್ತು, ಡಸ್ಟ್​ಬಿನ್​ಗೆ ಅಂಟಿಸಿದ್ದ ವಿದ್ಯಾರ್ಥಿ. ಅಷ್ಟೇ ಅಲ್ಲ ಜಾಯಿನ್ ಎಬಿವಿಪಿ ಅನ್ನೋ ಪೊಸ್ಟರ್ ನಲ್ಲಿ ಹಾಕಿದ್ದ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರ

ಅಷ್ಟೇ ಅಲ್ಲ ತನ್ನ ಇನ್ಸ್ಟಾಗ್ರಾಂನ ಸಾಮಾಜಿಕ ಜಾಲತಾಣದಲ್ಲಿ ಅಂಟಿಸಿಕೊಂಡು ಸ್ವಾಮಿ ವಿವೇಕನಂದ ಅವರಿಗೆ ಅವಮಾನ ಮಾಡಿದ್ದ ಆದರ್ಶ. ಈ ವಿಚಾರದ ಹಿನ್ನೆಲೆ ಕೇರಳದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದು, ಆದರ್ಶನನ್ನು ಅಮಾನತ್ತು ಮಾಡುವಂತೆ ಕೇರಳದ ವಿದ್ಯಾರ್ಥಿಗಳು ಪ್ರತಿಭಟನೆಗೆ ಕೂತಿದ್ದಾರೆ.

ಇದನ್ನು ಓದಿ : ಅಪ್ರಾಪ್ತ ಹಿಂದೂ ಹುಡುಗಿಯರ ಕಿಡ್ನಾಪ್ ; ನಾಲ್ವರ ಬಂಧನ

ಈ ಘಟನೆ ಹಿನ್ನೆಲೆ ವಿದ್ಯಾರ್ಥಿಗಳು ಧರಣಿ ಮಾಡಿದ್ದರಿಂದ, ವಿವೇಕಾನಂದ ಅವರಿಗೆ ಅವಮಾನ ಮಾಡಿದ್ದ ವಿದ್ಯಾರ್ಥಿ ಆದರ್ಶನನ್ನು ಅಮಾನತ್ತು ಮಾಡಿದ ಕೇಂದ್ರಿಯ ವಿಶ್ವವಿದ್ಯಾಲಯ. ಈ ಹಿನ್ನೆಲೆ ಆದರ್ಶನ ಅಮಾನತ್ತು ಖಂಡಿಸಿ ಕೇರಳದ ವಿದ್ಯಾರ್ಥಿಗಳು ಪ್ರತಿಭಟನೆಗೆ ಕೌಂಟರ್ ಆಗಿ ಎಬಿವಿಪಿಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES