Wednesday, January 22, 2025

ನಾಡಹಬ್ಬ ಮೈಸೂರು ದಸರಾ ವೇಳಾಪಟ್ಟಿ ಬಿಡುಗಡೆ

ಮೈಸೂರು : ನವರಾತ್ರಿ ಆಚರಣೆಯ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಪೂಜೆ ಪುನಾಸ್ಕರಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

2023 ರ ಮೈಸೂರು ದಸರಾ ಆಚರಣೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಹಿನ್ನೆಲೆ ನವರಾತ್ರಿ ಆಚರಣೆಯ ದಿನದೊಂದು ನಡೆಯಲಿರುವ ಶ್ರೀ ಚಾಮುಂಡೇಶ್ವರಿ ತಾಯಿಗೆ ನಡೆಯುವ ಪೂಜೆ, ಹಾಗೂ ಜಂಬೂ ಸವಾರಿಯು ಯಾವ ಯಾವ ಸಮಯದಲ್ಲಿ ನಡೆಯುತ್ತವೆ ಎಂದು ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆ ವೇಳಾಪಟ್ಟಿ ಈ ಕೆಳಗಿನಂತಿದೆ ನೋಡಿ.

ಇದನ್ನು ಓದಿ : ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ಹಾವಳಿ

ಅಕ್ಟೋಬರ್ 15-10-2023 ರ ಭಾನುವಾರ ಶರನ್ನವರಾತ್ರಿಯನ್ನು ಪ್ರಾರಂಭ ಮಾಡಲಾಗುತ್ತದೆ. ಹಾಗೆಯೇ ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 10.15 ರಿಂದ 10.36 ರ ಶುಭ ಲಗ್ನದಲ್ಲಿ ಚಾಮುಂಡೇಶ್ವರಿ ಪೂಜೆಯನ್ನು ನೇರವೆರಿಸಲಾಗುತ್ತದೆ. ಇನ್ನೂ ಮೈಸೂರು ಅರಮನೆಯಲ್ಲಿ ಅ. 15-10-2023 ರ ಸಾಯಂಕಾಲ 6.30 ರಿಂದ 7.15 ರ ಶುಭ ಮೇಷ ಲಗ್ನದಲ್ಲಿ ಪೂಜೆಗಳನ್ನು ಆರಂಭ ಮಾಡಲಾಗುತ್ತದೆ.

ಬಳಿಕ 20-10-2023 ರ ಶುಕ್ರವಾರದೊಂದು ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಲಿದ್ದು, ಶ್ರವಣ ನಕ್ಷತ್ರದ ದಿನದೊಂದು ಅಂದರೆ 24-10-2023 ರ ಮಂಗಳವಾರ ವಿಸರ್ಜನೆಯನ್ನು ಮಾಡಲಾಗುತ್ತದೆ.  21-10-2023 ರ ಶನಿವಾರ ಕಾಳರಾತ್ರಿಯಾಗಿದ್ದು ಹಾಗೂ ಮಹಿಷಾಸುರನ ಸಂಹಾರ ಕೂಡ ನಡೆದಿದ್ದು, 23-10-2023 ರ ಸೋಮವಾರ ಆಯುಧ ಪೂಜೆಯನ್ನು ಮಾಡಲಾಗುತ್ತದೆ.

ಬಳಿಕ 24-10-2023 ರ ಮಂಗಳವಾರ ವಿಜಯದಶಮಿ ಹಿನ್ನೆಲೆ ಮಧ್ಯಾಹ್ನ 1.46 ರಿಂದ 2.08 ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ನಂದೀ ಧ್ವಜ ಪೂಜೆಯನ್ನು ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ ಮಧ್ಯಾಹ್ನ 4.40 ರಿಂದ 5.00 ರ ಶುಭ ಮೀನ ಲಗ್ನದಲ್ಲಿ ಮಾನ್ಯ ಮುಖ್ಯಮಂತ್ರಿ ಅವರಿಂದ ಮತ್ತು ಗಣ್ಯಾತಿಗಣ್ಯರಿಂದ ಚಾಮುಂಡಿ ದೇವಿಗರೆ ಪುಷ್ಪಾರ್ಚನೆಯನ್ನು ಮಾಡಿಸಿ, ಜಂಬೂ ಸವಾರಿಯನ್ನು ಪ್ರಾರಂಭ ಮಾಡಲಾಗುತ್ತದೆ.

ಈ ಎಲ್ಲಾ ಪೂಜಾ ಕಾರ್ಯಕ್ರಮಗಳು ಮುಗಿದ ಬಳಿಕ 26-10-2023 ರ ಭಾನುವಾರ ಬೆಟ್ಟದ ಶ್ರೀ ಚಾಮುಂಡೇಶ್ವರಿ ರಥೋತ್ಸವವನ್ನು ನೇರವೆರಿಸಲಾಗುತ್ತದೆ. ಈ ರೀತಿಯ ನವರಾತ್ರಿ ಆಚರಣೆಯ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

RELATED ARTICLES

Related Articles

TRENDING ARTICLES