Monday, November 4, 2024

ಫೈಟ್ ಅಷ್ಟೇ ಅಲ್ಲ.. ರೊಮ್ಯಾನ್ಸ್​ನಲ್ಲೂ ಈ ಫೈಟರ್ ಪಂಟರ್!

ಬೆಂಗಳೂರು : ವಿನೋದ್ ಪ್ರಭಾಕರ್ ಈಗ ಫೈಟರ್ ಆಗಿ ತೆರೆ ಘರ್ಜಿಸಲು ರೆಡಿ ಆಗಿದ್ದಾರೆ. ಇತ್ತೀಚಿಗೆ ಫೈಟರ್ ಚಿತ್ರದ ಸಾಂಗ್ ಇವೆಂಟ್ ನಡೆದಿದ್ದು, ಫೈಟರ್ ಸ್ಪೆಷಾಲಿಟಿ ಹೇಳೋದ್ರ ಜೊತೆ ಚಾಲೆಂಜಿಂಗ್ ದರ್ಶನ್ ಜೊತೆ ಮಾಡಲಿರೋ ಹೊಸ ಪ್ರಾಜೆಕ್ಟ್​​ ಬಗ್ಗೆಯೂ ವಿನೋದ್ ಪ್ರಭಾಕರ್ ತಾಜಾ ಖಬರ್ ನೀಡಿದ್ದಾರೆ.

ಫೈಟರ್.. ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯಲ್ಲಿ ಬರ್ತಿರೋ ಹೊಸ ಸಿನಿಮಾ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಆಕ್ಷನ್ ಚಿತ್ರ. ಫ್ಯಾನ್ಸ್ ತಮ್ಮನ್ನ ಫೈಟರ್ ಆಗಿ ನೋಡೋದಕ್ಕೆ ಇಷ್ಟ ಪಡ್ತಾರೆ ಅನ್ನೋದನ್ನ ಮನಗಂಡಿರೋ ವಿನೋದ್, ಈಗ ಫುಲ್ ಟೈಮ್ ಫೈಟರೇ ಆಗಿಬಿಟ್ಟಿದ್ದಾರೆ.

ಬರೀ ಆಕ್ಷನ್ ಧಮಾಕಾ ಮಾತ್ರವಲ್ಲ.. ಈ ಫೈಟರ್ ರೊಮ್ಯಾನ್ಸ್ ಮಾಡೋದ್ರಲ್ಲೂ ಪಂಟರ್. ಚಿತ್ರದಲ್ಲಿ ಟೈಗರ್​ಗೆ ಜೋಡಿಯಾಗಿ ಲೇಖ ಚಂದ್ರ ಮತ್ತು ಪಾವನಾ ಗೌಡ ನಟಿಸಿದ್ದಾರೆ. ಸದ್ಯ ಫೈಟರ್ ರೊಮ್ಯಾಂಟಿಕ್ ಸಾಂಗ್ ವೊಂದು ರಿಲೀಸ್ ಆಗಿದೆ. ಗುರುಕಿರಣ್ ಮ್ಯೂಸಿಕ್ ನಲ್ಲಿ ಮೂಡಿಬಂದಿರೋ ಈ ಟ್ರೆಂಡಿ ಸಾಂಗ್ ಗೆ ಕವಿರಾಜ್ ಲಿರಿಕ್ಸ್ ಇದೆ. ಸೋಮಶೇಖರ್ ಕಟಿಗೇನಹಳ್ಳಿ ಈ ಸಿನಿಮಾವನ್ನ ನಿರ್ಮಿಸಿದ್ದು, ನೂತನ್ ಉಮೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಫೈಟರ್​ನಲ್ಲಿ ಫೈಟ್ ಮಾತ್ರ ಅಲ್ಲ ತಾಯಿ ಸೆಂಟಿಮೆಂಟ್, ಲವ್ ಕಹಾನಿ ಕೂಡ ಇದ್ದು ಇದೊಂದು ಪಕ್ಕಾ ಮಾಸ್ ಮಸಾಲಾ ಸಿನಿಮಾ ಅಂತಿದೆ ಚಿತ್ರತಂಡ.

ಮತ್ತೆ ದಚ್ಚು ಬ್ರದರ್ ಜೊತೆ ಟೈಗರ್!

ನಟ ವಿನೋದ್ ಫ್ರಭಾಕರ್ ಈ ಸಿನಿಮಾ ಬಗ್ಗೆ ತುಂಬಾನೇ ಭರವಸೆ ಇಟ್ಟುಕೊಂಡಿದ್ದಾರೆ. ಪಕ್ಕಾ ಅಭಿಮಾನಿಗಳಿಗೆ ಇಷ್ಟವಾಗುವಂಥಾ ಸಿನಿಮಾ ಇದು ಅಂತ ಹೇಳಿದ್ದಾರೆ. ಫೈಟರ್ ಸಿನಿಮಾದ ಅನುಭವ ಹೇಳೋದ್ರ ಜೊತೆಗೆ ವಿನೋದ್ ಮತ್ತೊಂದು ತಾಜಾ ಖಬರ್ ಕೊಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಮತ್ತೊಂದು ಸಿನಿಮಾ ಶೀಘ್ರದಲ್ಲೇ ಮಾಡೋದಾಗಿ ಹೇಳಿಕೊಂಡಿದ್ದಾರೆ. ಈ ಗುಡ್​ ನ್ಯೂಸ್​ ಕೇಳಿ ಟೈಗರ್ ಹಾಗೂ ಡಿ ಬಾಸ್​ ಫ್ಯಾನ್​ ಥ್ರಿಲ್ ಆಗಿದ್ದಾರೆ.

ದಾಸನ ಜೊತೆ ಹೊಸ ಪ್ರಾಜೆಕ್ಟ್?

ವಿನೋದ್ ಪ್ರಭಾಕರ್ ಈ ಹಿಂದೆ ನವಗ್ರಹ, ರಾಬರ್ಟ್ ಚಿತ್ರಗಳಲ್ಲಿ ದರ್ಶನ್ ಜೊತೆಯಾಗಿ ಕಾಣಿಸಿಕೊಂಡಿದ್ರು. ಅದ್ರಲ್ಲೂ ರಾಬರ್ಟ್​​ನಲ್ಲಿ ಜೀವದ ಗೆಳೆಯರಾಗಿ ಬ್ರದರ್ ಫ್ರಂ ಅನದರ್ ಮದರ್ ಅಂತ ಹಾಡಿ ಕುಣಿದಿದ್ರು. ಇದೀಗ ತಾವು ಮತ್ತೊಂದು ಸಿನಿಮಾದಲ್ಲಿ ಜೊತೆಯಾಗೋದಾಗಿ ಹೇಳಿ ಅಭಿಮಾನಿಗಳಿಗೆ ಖುಷ್ ಖಬರ್ ಕೊಟ್ಟಿದ್ದಾನೆ ಫೈಟರ್. ತನ್ನ ಹೈವೋಲ್ಟೇಜ್ ಆಕ್ಷನ್ ಟೀಸರ್ ನಿಂದ ಸದ್ದು ಮಾಡಿದ್ದ ಫೈಟರ್, ಈಗ ತನ್ನ ಹಾಡಿನ ಮೂಲಕ ಇದೊಂದು ಪಕ್ಕಾ ಮಾಸ್ ಪ್ಯಾಕೇಜ್ ಸಿನಿಮಾ ಅನ್ನೋದನ್ನ ಸಾರಿ ಹೇಳಿದೆ. ಈ ಮಾಸ್ ಫೈಟರ್ ಸದ್ಯದಲ್ಲೇ ಪ್ರೇಕ್ಷಕರ ಎದರು ಬರಲಿದ್ದಾನೆ.

  • ಫಿಲಂ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES