Sunday, December 22, 2024

ಬಿಜೆಪಿ ನಾಯಕರಿಗೆ ಡಿ.ಕೆ ಶಿವಕುಮಾರ್ ತಿರುಗೇಟು

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟ ಹಿನ್ನೆಲೆ ಡಿಕೆಶಿ ವಿರುದ್ಧ ಬಿಜೆಪಿ ಕಿಡಿಕಾರಿದ್ದು ಅವರಿಗೆ ಡಿ.ಕೆ ಶಿವಕುಮಾರ್ ಅವರು ತಿರುಗೇಟು ಕೊಟ್ಟಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಾ ಇರೋದಕ್ಕೆ ಡಿಕೆಶಿ ಅವರ ವಿರುದ್ಧ ಬಿಜೆಪಿ ಅವರು ಆಕ್ರೋಶವನ್ನು ವ್ಯಕ್ತಪಡಿಸಿ ಅವರ ವಿರುದ್ಧ ಕಿಡಿಕಾರಿದ್ದರು. ಈ ಹಿನ್ನೆಲೆ ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳ ಮೂಲಕ ಮಾತನಾಡಿದ್ದು, ಯಾರ್ ಬೇಕಾದ್ರೂ ಹೇಳಲಿ ನೀರು ಬಿಡಲು ಆಗಲ್ಲ ಅಂತಾ ಕೇಂದ್ರಕ್ಕೆ ಹೇಳಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ : ಕಾಫಿನಾಡಲ್ಲಿ ವೈದ್ಯನ ಮೇಲೆ ಹಲ್ಲೆ; ದಿನೇಶ್ ಗುಂಡೂರಾವ್ ಭೇಟಿ

ಅಷ್ಟೇ ಅಲ್ಲ ಕಮಿಟಿ ಮುಂದೇನೂ ಪ್ರಸ್ತಾಪ ಕೂಡ ಮಾಡ್ತೀವಿ. ನೀವು ಕಮಿಟಿ ಮುಂದೆ ಹೋಗಿ ಅಂತಾ ಲೀಗಲ್ ಎಕ್ಸ್​ಪರ್ಟ್​ ಹೇಳಿದ್ದಾರೆ. ಹಾಗೇಯೇ ಆರ್ಡರ್ ಫಾಲೋ ಮಾಡ್ತೀರಾ ಇಲ್ವಾ ಅಂತಾ ಕಮಿಟಿಯವರು ನೋಡಿ ಬೇರೆ ತರಹ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.  ಬಳಿಕ ಡಿ.ಕೆ ಅವರು ಈ ವಿಚಾರದ ಬಗ್ಗೆ ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ.

ಇನ್ನೂ ಬಿಜೆಪಿಯವರು ಇಷ್ಟೇಲ್ಲ ಮಾತನಾಡುತ್ತಾರೆ ಅಲ್ವಾ, ಕಾವೇರಿ ರಾಜ್ಯದ ಹಿತಾಸಕ್ತಿ ವಿಚಾರವನ್ನು ಪಿಎಂಗೆ ಹೇಳಿ ಸಮಸ್ಯೆ ಬಗೆಹರಿಸಲು ಆಗಿಲ್ಲ. ಔಟ್ ಆಫ್ ದಿ ಕೋರ್ಟ್​ ಬಗೆಹರಿಸಲು ಆಗಲ್ವಾ ಅಥವಾ ಇಬ್ಬರನ್ನೂ ಕೂರಿಸಿ ಮಾತಾಡೋಕೆ ಆಗಲ್ವಾ ಎಂದು ಬಿಜೆಪಿಯವರಿಗೆ ಡಿ.ಕೆ ಶಿವಕುಮಾರ್ ಅವರು ತಿರುಗೇಟನ್ನು ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES