ಮಂಡ್ಯ : ಸಕ್ಕರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ಮಾಧ್ಯಮಗಳ ಮೂಲಕ ಶಾಸಕ ಗಣಿಗ ರವಿಕುಮಾರ್ ಮಾತನಾಡಿದ್ದಾರೆ.
ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದು, ತಮಿಳುನಾಡಿಗೆ ನೀರು ನಿಲ್ಲಿಸುವ ಕುರಿತು ಮನವಿ ಮಾಡಿದ್ದೆ. ಈಗ ನನ್ನ ಮನವಿಯನ್ನು ಗಣನೀಯ ಮಾಡಿ ನೀರು ನಿಲ್ಲಿಸಿದ್ದು, ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇನ್ನೂ 1 ಲಕ್ಷ ಟನ್ ಕಬ್ಬು ಅರೆದು ಪೇಮೆಂಟ್ ಆಗಿದೆ. ಸಕ್ಕರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡದೆ ಜನರಿಗೆ ತೊಂದರೆಯನ್ನು ಕೊಡುತ್ತಿದ್ದಾರೆ. ಮೈಶುಗರ್ ಕಾರ್ಖಾನೆಗೆ ಎಂದು 10 ಕೋಟಿ ಹಣವನ್ನು ಕೇಳಲಾಗಿತ್ತು, ಆದರೆ ಸರ್ಕಾರ ಕೇವಲ 50 ಕೋಟಿ ಹಣವನ್ನು ಕಾರ್ಖಾನೆಗಳಿಗೆ ಕೊಟ್ಟಿದೆ ಎಂದು ಹೇಳಿದರು.
ಇದನ್ನು ಓದಿ : ಸಿದ್ದರಾಮಯ್ಯ ತಮಿಳುನಾಡು ಮುಖ್ಯಮಂತ್ರಿನಾ? : ಯಡಿಯೂರಪ್ಪ
ಮಂಡ್ಯ ಕ್ಷೇತ್ರವನ್ನು ಬರ ಪೀಡಿತ ಪ್ರದೇಶ ಘೋಷಣೆಯು ಆಗಿದೆ. ಹೊಸ ಸಕ್ಕರೆ ಕಾರ್ಖಾನೆಗಳಿಗೆ ಜಾಗವನ್ನು ನೋಡಲಾಗಿದ್ದು, ಶಿಘ್ರದಲ್ಲೇ ಹೊಸ ಕಾರ್ಖಾನೆಗಳಿಗೆ ಗುದ್ದಲಿ ಪೂಜೆಯನ್ನು ಸಹ ಮಾಡಲಾಗುತ್ತದೆ ಎಂದು ಶಾಸಕ ಗಣಿಗ ರವಿಕುಮಾರ್ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಕ್ಯಾನ್ಸರ್ ಆಸ್ಟತ್ರೆಗೆ 18 ಕೋಟಿ ಅನುದಾನವನ್ನು ಸಹ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.