Wednesday, January 22, 2025

ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ಹಾವಳಿ

ರಾಮನಗರ : ಒಂಟಿ ಸಲಗವೊಂದು ಗ್ರಾಮಕ್ಕೆ ನುಗ್ಗಿ ಕಂಬಗಳನ್ನು ಹಾಗೂ ಮರಗಳನ್ನು ಉರುಳಿಸುತ್ತಿರುವ ಘಟನೆ ಚನ್ನಪಟ್ಟಣ ತಾಲೂಕಿನ ಬಿ.ವಿ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಕೆಲವು ದಿನಗಳಿಂದ ಕಾಡಾನೆ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದರು. ಇದರ ಬೆನ್ನಲ್ಲೇ ನಿನ್ನೆ ರಾತ್ರಿ 11 ಗಂಟೆಗೆ ಸರಿಯಾಗಿ ಮತ್ತೆ ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಗ್ರಾಮದಲ್ಲಿ ವಿದ್ಯುತ್ ಕಂಬಗಳನ್ನು ಹಾಗೂ ಮನೆಯ ಬಳಿ ಇರುವ ತೆಂಗಿನ ಮರಗಳನ್ನು ಉರುಳಿಸಿದೆ.

ಇದನ್ನು ಓದಿ : ಸ್ವಾಮಿ ವಿವೇಕನಂದರವರಿಗೆ ಅವಮಾನ; ವಿದ್ಯಾರ್ಥಿ ಅಮಾನತ್ತು

ಇದರಿಂದ ಗ್ರಾಮದಲ್ಲಿ ಪದೇ ಪದೇ ಕಾಡಾನೆ ದಾಳಿಯಿಂದ ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಅಷ್ಟೇ ಅಲ್ಲ ರೈತರು ತಮ್ಮ ತಮ್ಮ ಜಮೀನುಗಳಿಗೂ ಹೋಗಲು ಸಹ ಒಂಟಿ ಸಲಗದ ಭಯದಿಂದ ಓಡಾಡುತ್ತಿದ್ದಾರೆ

ಈ ಘಟನೆ ಹಿನ್ನೆಲೆ ಪೋಲಿಸರಿಗೆ ಮಾಹಿತಿ ತಿಳಿಸಿದ್ದು, ಆನೆಯನ್ನು ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸವನ್ನೇ ಪಟ್ಟಿದ್ದಾರೆ.

RELATED ARTICLES

Related Articles

TRENDING ARTICLES