ಬೆಂಗಳೂರು : ‘ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪರ ವಿರೋಧಗಳು ಬರುತ್ತಿದೆ. ನಾನು ಪರ ಹಾಗೂ ವಿರೋಧವೂ, ಇಬ್ಬರ ಜೊತೆನೂ ಇದ್ದೇನೆ. ವಿರೋಧದವರ ಜೊತೆ ಯಾಕೆ ಅಂದ್ರೆ.. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರಬಾರದು ಅಂತ ಅಷ್ಟೇ..’ ಎಂದು ಸಾಮಾಜಿಕ ಹೋರಾಟಗಾರ ಅಬ್ದುಲ್ ರಜಾಕ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೌಜನ್ಯಳ ಪ್ರಕರಣ ಮರು ತನಿಖೆಯಾಗಬೇಕು. ಈ ಸಂಬಂಧ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಪತ್ರ ನೀಡುತ್ತೇವೆ ಎಂದು ತಿಳಿಸಿದರು.
ಸೌಜನ್ಯ ವಿಚಾರವಾಗಿ ಸಿಸಿಬಿ ಸರಿಯಾದ ತನಿಖೆಯಾಗಿಲ್ಲ. ತನಿಖೆಗೆ ಒಂದು ಪ್ರೊಸಿಜರ್ ಇರುತ್ತೆ, ಅದನ್ನು ಯಾರು ಫಾಲೋ ಮಾಡಿರಲ್ಲ. ಡಾಕ್ಟರ್ ಆದವನು ಸ್ಯಾಂಪಲನ್ನು ಒಣಗಿಸಿ ಟೆಸ್ಟ್ಗೆ ತಗೊಂಡಿಲ್ಲ. ಅಲ್ಲಿ ಡಾಕ್ಟರ್ ಕೂಡ ಎಡವಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸಂತೋಷ್ಗೆ ಪರಿಹಾರವೇ ನೀಡಿಲ್ಲ
ಸಂತೋಷ್ ನಿರಾಪರಾಧಿ ಎಂದು ಸಾಬೀತಾದ ಬಳಿಕ ಈ ಒಂದು ಚರ್ಚೆ ಆಗುತ್ತಿದೆ. ರಾಜ್ಯ ಸರ್ಕಾರ ಎಲ್ಲಾದಕ್ಕೂ ಪರಿಹಾರ ನೀಡುತ್ತದೆ. ಆದರೆ, ಸಂತೋಷ್ ರಾವ್ಗೆ ಯಾವ ಪರಿಹಾರ ನೀಡಿಲ್ಲ. ಸಂತೋಷ್ 11 ವರ್ಷ ಜೈಲಿನಲ್ಲಿ ಇದ್ದರು, ಅವರಿಗೆ ಸರ್ಕಾರ ಯಾಕೆ ಪರೀಕ್ಷೆ ನೀಡಿಲ್ಲ. ಸರ್ಕಾರದ ವಿರುದ್ದ ನಾನು ಮಾತನಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.