Sunday, December 22, 2024

I am fine now.. ನೀವು ಚಿಂತಿಸಬೇಡಿ : ನಟ ಪ್ರಕಾಶ್ ರಾಜ್ ಟ್ವೀಟ್

ಬೆಂಗಳೂರು : ಸದಾ ಆಳುವ ಸರ್ಕಾರದ ವಿರುದ್ಧ ಚಾಟಿ ಬೀಸುವ ನಟ ಪ್ರಕಾಶ್​ ರಾಜ್ ಅವರು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ.

‘ನನ್ನ ವೃತ್ತಿ ಜೀವನಕ್ಕಿಂತ, ನನ್ನನ್ನು ಬೆಳಸಿದ ಸಮಾಜ ಮುಖ್ಯ. ನೀವು ಚಿಂತಿಸಬೇಡಿ.. ನಾನು ಚೆನ್ನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ಕಳೆದುಕೊಳ್ಳುವಷ್ಟು ಶ್ರೀಮಂತನಾಗಿದ್ದೇನೆ. ನಮ್ಮ ಹೊರಾಟವನ್ನು ಮುಂದುವರಿಸೋಣ, ವಿಶ್ವಮಾನವರಾಗೋಣ’ ಎಂದು ನಟ ಪ್ರಕಾಶ್​ ಪೋಸ್ಟ್​ ಮಾಡಿದ್ದಾರೆ.

ವೃತ್ತಿ ಜೀವನಕ್ಕೆ ಮಾರಕವೇ?

ಪ್ರಕಾಶ್‌ ರಾಜ್ ಅವರು ದಮನಿತರ ಧ್ವನಿಯಾಗಿ ತಮ್ಮ ಸಿದ್ಧಾಂತವನ್ನು ಪ್ರಬಲವಾಗಿ ವ್ಯಕ್ತಪಡಿಸುತ್ತಿದ್ದಾರೆ. ಆಳುವ ಸರ್ಕಾರಕ್ಕೆ ಪ್ರಬಲ ವಿರೋಧ ಪಕ್ಷದಂತೆ ಚಾಟಿ ಬೀಸುತ್ತಿರುವುದು ನಿಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದೇ? ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರಕಾಶ್ ರಾಜ್ ಮೇಲಿನಂತೆ ಉತ್ತರಿಸಿದ್ದಾರೆ.

‘ನೀವು ಶ್ರೀಮಂತರು.. ಏಕೆಂದರೆ ನೀವು ನಿಮ್ಮ ಆತ್ಮವನ್ನು ಮಾರಿದ್ದೀರಿ.. ಮತ್ತು ರಾಷ್ಟ್ರೀಯ ವಿರೋಧಿಗಳ ಏಜೆಂಟ್ ಆಗಿದ್ದೀರಿ..’ ಎಂದು ಕೆಲವು ನೆಟ್ಟಿಗರು ಪ್ರಕಾಶ್ ರಾಜ್​ ಟ್ವೀಟ್​ಗೆ ಕಮೆಂಟ್ ಮಾಡಿದ್ದಾರೆ.

https://x.com/prakashraaj/status/1701297417939988551?s=20

RELATED ARTICLES

Related Articles

TRENDING ARTICLES