Sunday, January 19, 2025

ಜಿ20 ಶೃಂಗಸಭೆ ಯಶಸ್ವಿಗೆ ‘ನಮೋ’ಗೆ ಅಭಿನಂದನೆ

ದೆಹಲಿ: ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದಕ್ಕಾಗಿ ಪಕ್ಷದ ಹಿರಿಯ ನಾಯಕರು ಪ್ರಧಾನಿ ಮೋದಿಯವರನ್ನ ಅಭಿನಂದಿಸಿದರು.

ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಯ್ತು. ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿರುವ ಪ್ರಧಾನ ಕಚೇರಿಯಲ್ಲಿ ಮೋದಿಯನ್ನ ಬರಮಾಡಿಕೊಳ್ಳಲು ಸಾಲಾಗಿ ನಿಂತಿದ್ದರು.

ಇದನ್ನೂ ಓದಿ: ಕರ್ನಾಟಕ ಗೆಜೆಟಿಯರ್​ ಇಲಾಖೆಗೆ ರೋಹಿಣಿ ಸಿಂಧೂರಿ ವರ್ಗಾವಣೆ!

ಪ್ರಧಾನಿ ಮೋದಿಗೆ ಹೂ ಮಳೆ ಸುರಿಸಿ ಅದ್ದೂರಿಯಾಗಿ ಬರಮಾಡಿಕೊಂಡ್ರು. ಮೋದಿಯೂ ನೆರೆದಿದ್ದ ಜನರತ್ತ ಕೈಬಿಸಿ ಕೃತಜ್ಞತೆ ಸಲ್ಲಿಸಿದ್ರು. G20 ಶೃಂಗಸಭೆಗೆ ಮೋದಿ ನಾಯಕತ್ವವು ವಿಶ್ವ ನಾಯಕರಿಂದ ಪ್ರಶಂಸೆ ಗಳಿಸುವುದರೊಂದಿಗೆ ಭಾರೀ ಯಶಸ್ಸನ್ನು ಕಂಡಿತು.

RELATED ARTICLES

Related Articles

TRENDING ARTICLES